National
ಆ್ಯಪ್ ನಿಷೇಧಕ್ಕೆ ಚೀನಾ ಪ್ರತಿಕ್ರಿಯೆ, ಅಂತರರಾಷ್ಟ್ರೀಯ ಕಾನೂನು ಹಕ್ಕು ಎತ್ತಿಹಿಡಿಯುವಂತೆ ಸೂಚನೆ……….
ನವದೆಹಲಿ, ಜೂನ್ 30: ಚೀನಾದ 59 ಆ್ಯಪ್ ಗಳನ್ನು ಭಾರತದಲ್ಲಿ ನಿಶೇಧ ಹೇರಿದ ವಿಚಾರದಲ್ಲಿ ಚೀನಾ ಸರಕಾರ ಮೊದಲ ಬಾರಿಗೆ ಪ್ರತಿಕ್ರಿಯಿಸಿದೆ. ಟಿಕ್ ಟಾಕ್ ಸೇರಿದಂತೆ ಚೀನಾದ 59 ಆ್ಯಪ್ ಗಳನ್ನು ಕೇಂದ್ರ ಸರಕಾರ ಭಾರತದಲ್ಲಿ ನಿಶೇಧ ಹೇರಿದ್ದು, ದೇಶದ ಭದ್ರತೆ ಹಾಗೂ ಸಾರ್ವಭೌಮತ್ವಕ್ಕೆ ಧಕ್ಕೆ ತರುವಂತಹ ರೀತಿಯಲ್ಲಿ ಈ ಆ್ಯಪ್ ಗಳು ಕಾರ್ಯ ನಿರ್ವಹಿಸುತ್ತಿದ್ದವು ಎನ್ನುವ ವಿಚಾರವನ್ನೂ ಸ್ಪಷ್ಟಪಡಿಸಿದೆ.
ಭಾರತ-ಚೀನಾ ಗಡಿಭಾಗವಾದ ಲಡಾಕ್ ನಲ್ಲಿ ಕಳೆದ ಕೆಲವು ದಿನಗಳಿಂದ ಚೀನಾ ಸೈನ್ಯದ ಉಪಟಲವು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಕೇಂದ್ರ ಸರಕಾರಈ ದಿಟ್ಟ ನಿರ್ಧಾರವನ್ನು ತಳೆದಿದೆ. ಟಿಕ್ ಟಾಕ್ ಭಾರತದಲ್ಲಿ ಅತ್ಯಂತ ಹೆಚ್ಚು ಜನ ಉಪಯೋಗಿಸುತ್ತಿದ್ದ ಆ್ಯಪ್ ಆಗಿದ್ದು, ದೇಶದಲ್ಲಿ ಸುಮಾರು 12 ಕೋಟಿ ಗ್ರಾಹಕರು ಈ ಆ್ಯಪನ್ನ ಬಳಸುತ್ತಿದ್ದರು. ನಿಶೇಧದ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯಿಸಿದ ಚೀನಾ ಕಂಪನಿಗಳು ಅಂತರರಾಷ್ಟ್ರೀಯ ಕಾನೂನುಗಳನ್ನು ಚಾಚೂ ತಪ್ಪದೆ ಪಾಲಿಸುವಂತೆ ಈಗಾಗಲೇ ಸರಕಾರದ ವತಿಯಿಂದ ನಿರ್ದೇಶನಗಳನ್ನು ನೀಡಲಾಗಿದೆ. ಈ ನಿಟ್ಟಿನಲ್ಲೇ ಚೀನಾ ಕಂಪನಿಗಳು ಕಾರ್ಯಾಚರಿಸುತ್ತಿದೆ. ಕಂಪನಿಗಳ ಅಂತರರಾಷ್ಟ್ರೀಯ ಹಕ್ಕುಗಳನ್ನು ಎತ್ತಿಹಿಡಿಯುವ ಭಾದ್ಯತೆ ಭಾರತ ಸರಕಾರದ ಮೇಲಿದೆ ಎಂದು ಚೀನಾದ ವಿದೇಶಾಂಗ ಇಲಾಖೆ ವಕ್ತಾರ ಜೋ ಲಿಜ್ಜನ್ ಪ್ರತಿಕ್ರಿಯಿಸಿದ್ದಾರೆ.