LATEST NEWS
ಗಾಳಿ ಮಳೆಗೆ ಏಕಾಏಕಿ ಕುಸಿದು ಬಿದ್ದ ಶಾಲಾ ಕಟ್ಟಡದ ಮೇಲ್ಚಾವಣಿ – ಒಂದು ಹಂಚು ಬೀಳುತ್ತಲೇ ಹೊರಗೆ ಓಡಿ ಬಚಾವ್ ಆದ ಮಕ್ಕಳು

ಮಂಗಳೂರು ಜೂನ್ 30: ಗಾಳಿ ಮಳೆಗೆ ಏಕಾಏಕಿ ಶಾಲಾ ಕಟ್ಟಡ ಮೇಲಾವಣಿ ಕುಸಿದು ಬಿದ್ದ ಘಟನೆ ಮಂಗಳೂರು ಹೊರವಲಯದ ಪೇಜಾವರ ಗ್ರಾಮದಲ್ಲಿ ನಡೆದಿದೆ. ಒಂದು ಹಂಚು ಬೀಳುತ್ತಿದ್ದಂತೆ ಮಕ್ಕಳು ಹೊರಗೆ ಓಡಿದ್ದರಿಂದ ಭಾರೀ ದೊಡ್ಡ ದುರಂತವೊಂದು ತಪ್ಪಿದೆ.
ಜೋಕಟ್ಟೆ ಸಮೀಪದ ಪೇಜಾವರ ಮೂಲ ಮಠದ ಬಳಿಯಿರುವ ಕೆಂಜಾರು ಮುಖ್ಯಪ್ರಾಣ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಮಧ್ಯಾಹ್ನ 12.30ರ ವೇಳೆಗೆ ಘಟನೆ ನಡೆದಿದೆ.

ಈ ವೇಳೆ ಬಂದ ಗಾಳಿ ಮಳೆಗೆ ಮೇಲ್ಮಾವಣಿಯ ಒಂದು ಹಂಚು ಜಾರುತ್ತಿದ್ದಂತೆ ಮಕ್ಕಳು ಹೊರಗೆ ಓಡಿ ಹೋಗಿದ್ದಾರೆ. ಈ ಘಟನೆಯಲ್ಲಿ ಯುಕೆಜಿ ವಿದ್ಯಾರ್ಥಿಗೆ ತಲೆ ಮತ್ತು ಮುಖಕ್ಕೆ ಗಾಯವಾಗಿದ್ದು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಶಾಲೆಯಲ್ಲಿ 21 ವಿದ್ಯಾರ್ಥಿಗಳಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ.