Connect with us

LATEST NEWS

ಚಿಕ್ಕಮಗಳೂರು ಕೋಮುಗಲಭೆಗೆ ಸಂಚು : ಒಂಭತ್ತು ದುಷ್ಕರ್ಮಿಗಳ ಬಂಧನ

ಚಿಕ್ಕಮಗಳೂರು ಕೋಮುಗಲಭೆಗೆ ಸಂಚು : ಒಂಭತ್ತು ದುಷ್ಕರ್ಮಿಗಳ ಬಂಧನ

ಚಿಕ್ಕಮಗಳೂರು, ಡಿಸೆಂಬರ್ 03 : ಕಾಫಿನಾಡು ಚಿಕ್ಕಮಗಳೂರಿನಲ್ಲಿ ಮಿಂಚಿನ ಕಾರ್ಯಚರಣೆ ನಡೆಸಿದ ಪೋಲಿಸರು ಗಲಭೆಗೆ ಹೊಂಚು ಹಾಕುತ್ತಿದ್ದ 9 ಜನ ದುಷ್ಕರ್ಮಿಗಳನ್ನು ಬಂಧಿಸಿದ್ದಾರೆ.

ಬಂಧಿತರಿಂದ 5 ಪೆಟ್ರೊಲ್ ಬಾಂಬುಗಳನ್ನು ವಶಪಡಿಸಿಕೊಂಡಿದ್ದಾರೆ. ಚಿಕ್ಕಮಗಳೂರಿನ ಮಾರ್ಕೆಟ್ ರಸ್ತೆಯಲ್ಲಿ ಗಲಭೆಗೆ ಹೊಂಚು ಹಾಕುತ್ತಿದ್ದ ಸಂದರ್ಭ ಮಾಹಿತಿ ಪಡೆದ ಪೋಲಿಸರು ದಾಳಿ ನಡೆಸಿದ್ದಾರೆ.

ಬಂಧಿತರೆಲ್ಲಾ ಒಂದು ಕೋಮಿಗೆ ಸೇರಿದ ಜನರಾಗಿದ್ದಾರೆ ಎಂದು ಪೋಲಿಸ್ ಅಧಿಕಾರಿಗಳು ತಿಳಿಸಿದ್ದಾರೆ.

ಬಂಧಿತರಿಂದ ಕಬ್ಬಿಣದ ರಾಡ್ ಗಳು, ದ್ವಿಚಕ್ರ ವಾಹನಗಳನ್ನು ವಶ ಪಡಿಸಿಕೊಂಡಿದ್ದಾರೆ. ಇವರೆಲ್ಲಾ 15 ರಿಂದ 20 ವರ್ಷ ಒಳಗಿನ ಯುವಕರಾಗಿದ್ದಾರೆ ಎಂದು ಪೋಲಿಸ್ ಅಧಿಕಾರು ಮಾಹಿತಿ ನೀಡಿದ್ದಾರೆ.

ನಿನ್ನೆಯ ದತ್ತ ಪೀಠ ದಾಂಧಲೆಯ ನಂತರ ಚಿಕ್ಕಮಗಳೂರಿನಲ್ಲಿ ನಡೆದ ಅಹಿತಕರ ಘಟನೆ, ಗುಂಪು ಗಲಭೆಗಳು ಚಿಕ್ಕಮಗಳೂರನ್ನು ಬೂದಿ ಮುಚ್ಚಿದ ಕೆಂಡದಂತೆ ಮಾಡಿತ್ತು.

ಪೊಲೀಸರು ಒಂದೇ ಒಂದು ಕ್ಷಣ ಮೈಮರೆತಿದ್ರು ಕಾಫಿನಾಡು ಅಕ್ಷರಶಃ ರಣರಂಗವಾಗ್ತಿರುವುದಲ್ಲಿ ಯಾವುದೇ ಸಂಶಯಗಳಿಲ್ಲ.

ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿ ಅಣ್ಣಮಲೈ ನೇತ್ರತ್ವದಲ್ಲಿ ಬಿಗಿ ಪೋಲಿಸ್ ಬಂದೋಬಸ್ತ್ ಮುಂದುವರೆದಿದೆ. ಇದೀಗ ನಿಧಾನವಾಗಿ ಕಾಫಿನಾಡಿನಲ್ಲಿ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳುತ್ತಿದೆ.
ದತ್ತ ಪೀಠ ವಿವಾದ: ಸರ್ಕಾರಕ್ಕೆ ವರದಿ ನೀಡಿದ ನ್ಯಾ.ನಾಗಮೋಹನ್ ದಾಸ್

ಈ ಮಧ್ಯೆ ಚಿಕ್ಕಮಗಳೂರಿನ ಬಾಬಾ ಬುಡನ್‌ ಗಿರಿಯ ದತ್ತ ಪೀಠ ವಿವಾದ ಕುರಿತಂತೆ ನಿವೃತ್ತ ನ್ಯಾಯಮೂರ್ತಿ ನಾಗಮೋಹನ ದಾಸ್‌ ನೇತೃತ್ವದ ಸಮಿತಿ ಸರ್ಕಾರಕ್ಕೆ ವರದಿ ಸಲ್ಲಿಸಿದೆ.

ಕಾನೂನು ಸಚಿವ ಟಿ.ಬಿ. ಜಯಚಂದ್ರ ಅವರ ಸರ್ಕಾರಿ ನಿವಾಸಕ್ಕೆ ತೆರಳಿ ನ್ಯಾ.ನಾಗಮೋಹನ್‌ ದಾಸ್‌ ಅವರು ವರದಿಯನ್ನು ಹಸ್ತಾಂತರಿಸಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಕಾನೂನು ಸಚಿವ ಟಿ.ಬಿ. ಜಯಚಂದ್ರ, ದತ್ತ ಪೀಠದ ವಿವಾದವನ್ನು ಸರ್ಕಾರವೇ ಬಗೆ ಹರಿಸುವಂತೆ ಸುಪ್ರೀಂ ಕೋರ್ಟ್‌ ಸೂಚನೆ ನೀಡಿತ್ತು.

ಈ ಸಂಬಂಧ ಸಂಪುಟ ಉಪ ಸಮಿತಿ ರಚನೆ ಮಾಡಲಾಗಿತ್ತು. ಉಪ ಸಮಿತಿ ಸಲಹೆಯಂತೆ ನಾಲ್ಕು ತಿಂಗಳ ಹಿಂದೆ ನ್ಯಾ. ನಾಗಮೋಹನ್‌ ದಾಸ್‌ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು.

ಆ ಸಮಿತಿ ಪರ ವಿರೋಧ ವಾದಗಳನ್ನು ಆಲಿಸಿ ವರದಿ ನೀಡಿದೆ. ಈ ಕುರಿತು ಸಂಪುಟ ಸಭೆಯಲ್ಲಿ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ನಾಗಮೋಹನ ದಾಸ್‌ ನೇತೃತ್ವದ ಸಮಿತಿ ರಚನೆ ಯಾಕೆ ?

ದತ್ತ ಪೀಠ ವಿವಾದ ಇಂದು ನಿನ್ನೆಯದಲ್ಲ. ಇದಕ್ಕೆ ದಶಕಗಳ ಇತಿಹಾಸ ಇದೆ.

1975 ರಿಂದ ಆರಂಭವಾದ ಈ ವಿವಾದದ ಕುರಿತು ಸುಪ್ರೀಂ ಕೋರ್ಟ್‌ ಮೇ ತಿಂಗಳಲ್ಲಿ ಆದೇಶ ನೀಡಿತ್ತು.

ಆರು ವಾರಗಳಲ್ಲಿ ಸರ್ಕಾರವೇ ಮಾತುಕತೆಯ ಮೂಲಕ ವಿವಾದ ಬಗೆ ಹರಿಸುವಂತೆ ಆದೇಶ ಕೂಡ ನೀಡಿತ್ತು.

ಸುಪ್ರೀಂ ಆದೇಶದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸಂಪುಟ ಉಪ ಸಮಿತಿ ರಚನೆ ಮಾಡಿತ್ತು.

ಈ ಸಮಿತಿ ಆರು ವಾರಗಳಲ್ಲಿ ವಿವಾದದ ಕುರಿತು ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗದ ಹಿನ್ನೆಲೆಯಲ್ಲಿ, ಕೋರ್ಟ್‌ನ ನ್ಯಾಯಾಂಗ ನಿಂದನೆಯಿಂದ ತಪ್ಪಿಸಿಕೊಳ್ಳಲು ನ್ಯಾಯಮೂರ್ತಿ ನಾಗಮೋಹನ್‌ ದಾಸ್‌ ನೇತೃತ್ವದಲ್ಲಿ ಕಾನೂನು ತಜ್ಞರ ಸಮಿತಿಯನ್ನು ರಚನೆ ಮಾಡಿತ್ತು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *