Connect with us

    LATEST NEWS

    ಕರಾವಳಿಯಲ್ಲಿ ದಿಢೀರ್ ಏರಿಕೆಯಾದ ಕೋಳಿ ಮಾಂಸದ ಬೆಲೆ…!!

    ಮಂಗಳೂರು ಮಾರ್ಚ್ 08: ಕರಾವಳಿಯಲ್ಲಿ ಬಿಸಿಲಿನ ಝಳದ ಏರಿಕೆಯಾಗುತ್ತಿರುವ ನಡುವೆ ಇದೀಗ ಕೋಳಿ ಮಾಂಸದ ರೇಟ್ ಕೂಡ ಏರಿಕೆಯಾಗ ತೊಡಗಿದೆ. ಬಿಸಿಲಿಗೆ ಮಾಂಸದ ಕೋಳಿಗಳ ದಿಢೀರ್ ಸಾವುಯಾಗುತ್ತಿರುವ ಹಿನ್ನಲೆ ಕೋಳಿ ಮಾಂಸದ ಧಾರಣೆ ಮೂರು ನಾಲ್ಕು ದಿನಗಳಲ್ಲಿ ಪ್ರತಿ ಕೆ.ಜಿ.ಗೆ ₹ 40ರಿಂದ ₹50ರವರೆಗೆ ಜಾಸ್ತಿ ಆಗಿದೆ.


    ನಾಲ್ಕು ದಿನಗಳ ಹಿಂದೆ ಪ್ರತಿ ಕೆ.ಜಿ.ಗೆ ₹ 220 ಇದ್ದ ಕೋಳಿಮಾಂಸದ (ಸ್ಕಿನ್‌ ಔಟ್‌) ದರ ಈಗ ₹ 270ಕ್ಕೆ ಹೆಚ್ಚಳವಾಗಿದೆ. ಚರ್ಮಸಹಿತ (ವಿತ್‌ ಸ್ಕಿನ್) ಕೋಳಿ ಮಾಂಸದ ಧಾರಣೆ ಕೆ.ಜಿ.ಗೆ 190 ಇದ್ದುದು ಈಗ ₹ 240ಕ್ಕೆ ಏರಿಕೆಯಾಗಿದೆ. ಜೀವಂತ ಬ್ರಾಯ್ಲರ್‌ ಕೋಳಿಯ ದರವು ಪ್ರತಿ ಕೆ.ಜಿ.ಗೆ ₹ 130 ಇದ್ದುದು ₹ 170ರಿಂದ ₹ 180ಕ್ಕೆ ಹೆಚ್ಚಳವಾಗಿದೆ.

    ಕರಾವಳಿ ಜಿಲ್ಲೆಗಳಲ್ಲಿ ಕೆಲವು ಕಡೆ ವಾತಾವರಣದ ಉಷ್ಣಾಂಶ 40 ಡಿಗ್ರಿ ಸೆಲ್ಸಿಯಸ್‌ ದಾಟಿದೆ. ಉಷ್ಣಾಂಶ ಹೆಚ್ಚಳದಿಂದ ಸಾಯುತ್ತಿರುವ ಕೋಳಿಗಳನ್ನು ಉಳಿಸಿಕೊಳ್ಳಲು ಕೋಳಿ ಫಾರ್ಮ್‌ ಮಾಲೀಕರು ಹರಸಾಹಸಪಡುತ್ತಿದ್ದಾರೆ. ಕೆಲವರು ಕೋಳಿ ಸಾಕುವುದನ್ನೇ ನಿಲ್ಲಿಸುವ ಹಂತವನ್ನು ತಲುಪಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply