LATEST NEWS
ಕರಾವಳಿಯಲ್ಲಿ ದಿಢೀರ್ ಏರಿಕೆಯಾದ ಕೋಳಿ ಮಾಂಸದ ಬೆಲೆ…!!
ಮಂಗಳೂರು ಮಾರ್ಚ್ 08: ಕರಾವಳಿಯಲ್ಲಿ ಬಿಸಿಲಿನ ಝಳದ ಏರಿಕೆಯಾಗುತ್ತಿರುವ ನಡುವೆ ಇದೀಗ ಕೋಳಿ ಮಾಂಸದ ರೇಟ್ ಕೂಡ ಏರಿಕೆಯಾಗ ತೊಡಗಿದೆ. ಬಿಸಿಲಿಗೆ ಮಾಂಸದ ಕೋಳಿಗಳ ದಿಢೀರ್ ಸಾವುಯಾಗುತ್ತಿರುವ ಹಿನ್ನಲೆ ಕೋಳಿ ಮಾಂಸದ ಧಾರಣೆ ಮೂರು ನಾಲ್ಕು ದಿನಗಳಲ್ಲಿ ಪ್ರತಿ ಕೆ.ಜಿ.ಗೆ ₹ 40ರಿಂದ ₹50ರವರೆಗೆ ಜಾಸ್ತಿ ಆಗಿದೆ.
ನಾಲ್ಕು ದಿನಗಳ ಹಿಂದೆ ಪ್ರತಿ ಕೆ.ಜಿ.ಗೆ ₹ 220 ಇದ್ದ ಕೋಳಿಮಾಂಸದ (ಸ್ಕಿನ್ ಔಟ್) ದರ ಈಗ ₹ 270ಕ್ಕೆ ಹೆಚ್ಚಳವಾಗಿದೆ. ಚರ್ಮಸಹಿತ (ವಿತ್ ಸ್ಕಿನ್) ಕೋಳಿ ಮಾಂಸದ ಧಾರಣೆ ಕೆ.ಜಿ.ಗೆ 190 ಇದ್ದುದು ಈಗ ₹ 240ಕ್ಕೆ ಏರಿಕೆಯಾಗಿದೆ. ಜೀವಂತ ಬ್ರಾಯ್ಲರ್ ಕೋಳಿಯ ದರವು ಪ್ರತಿ ಕೆ.ಜಿ.ಗೆ ₹ 130 ಇದ್ದುದು ₹ 170ರಿಂದ ₹ 180ಕ್ಕೆ ಹೆಚ್ಚಳವಾಗಿದೆ.
ಕರಾವಳಿ ಜಿಲ್ಲೆಗಳಲ್ಲಿ ಕೆಲವು ಕಡೆ ವಾತಾವರಣದ ಉಷ್ಣಾಂಶ 40 ಡಿಗ್ರಿ ಸೆಲ್ಸಿಯಸ್ ದಾಟಿದೆ. ಉಷ್ಣಾಂಶ ಹೆಚ್ಚಳದಿಂದ ಸಾಯುತ್ತಿರುವ ಕೋಳಿಗಳನ್ನು ಉಳಿಸಿಕೊಳ್ಳಲು ಕೋಳಿ ಫಾರ್ಮ್ ಮಾಲೀಕರು ಹರಸಾಹಸಪಡುತ್ತಿದ್ದಾರೆ. ಕೆಲವರು ಕೋಳಿ ಸಾಕುವುದನ್ನೇ ನಿಲ್ಲಿಸುವ ಹಂತವನ್ನು ತಲುಪಿದ್ದಾರೆ.