Connect with us

    LATEST NEWS

    ಛತ್ತೀಸ್‌ಗಢ : ಗೂಡ್ಸ್ ವಾಹನಕ್ಕೆ ಟ್ರಕ್ ಡಿಕ್ಕಿ,ಮಕ್ಕಳು ಸೇರಿ 8 ಮೃತ್ಯು, 22 ಮಂದಿ ಗಂಭೀರ..!

    ಛತ್ತೀಸ್‌ಗಢ: ಛತ್ತೀಸ್ ಗಢ(Chhattisgarh) ದಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಮಕ್ಕಳು ಐವರು ಮಹಿಳೆಯರು ಸೇರಿ ಗೂಡ್ಸ್ ವಾಹನದಲ್ಲಿದ್ದ ಎಂಟು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

    ಛತ್ತೀಸ್‌ಗಢದ (Chhattisgarh)  ಬೆಮೆತಾರಾ ಹೆದ್ದದಾರಿಯಲ್ಲಿ  ಭಾನುವಾರ ರಾತ್ರಿ ಈ ದುರ್ಘಟನೆ ಸಂಭವಿಸಿದೆ.
    ಮೃತರನ್ನು ಭೂರಿ ನಿಶಾದ್ (50), ನೀರಾ ಸಾಹು (55), ಗೀತಾ ಸಾಹು (60), ಅಗ್ನಿಯಾ ಸಾಹು (60), ಖುಷ್ಬು ಸಾಹು (39), ಮಧು ಸಾಹು (5), ರಿಕೇಶ್ ನಿಶಾದ್ (6) ಮತ್ತು ಟ್ವಿಂಕಲ್ ನಿಶಾದ್ ಎಂದು ಗುರುತಿಸಲಾಗಿದೆ.
    ಮೃತರೆಲ್ಲರೂ ಕೌಟುಂಬಿಕ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಹಿಂತಿರುಗುತ್ತಿದ್ದಾಗ ಕಥಿಯಾ ಗ್ರಾಮದ ಬಳಿ ಭಾನುವಾರ ತಡರಾತ್ರಿ ಈ ಅಪಘಾತ ಸಂಭವಿಸಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
    ಮೃತರನ್ನು ಪಥರಾ ಗ್ರಾಮದ ಸ್ಥಳೀಯರು ಎನ್ನಲಾಗಿದ್ದು, ತಿರೈಯಾ ಗ್ರಾಮದಲ್ಲಿ ನಡೆದ ಕೌಟುಂಬಿಕ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಹಿಂತಿರುಗುತ್ತಿದ್ದರು ಎಂದು ಅಧಿಕಾರಿ ತಿಳಿಸಿದ್ದಾರೆ. ಘಟನೆಯಲ್ಲಿ 22 ಮಂದಿ ಗಾಯಗೊಂಡಿದ್ದು ಅವರಲ್ಲಿ ನಾಲ್ವರ ಸ್ಥತಿ ಗಂಭೀರವಾಗಿದ್ದು ಅವರನ್ನು ರಾಯ್‌ಪುರ ಏಮ್ಸ್‌ಗೆ ದಾಖಲಿಸಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply