Connect with us

DAKSHINA KANNADA

ಭಾರೀ ಮಳೆಗೆ ಎರಡನೇ ಬಾರಿ ಚೆಲ್ಯಡ್ಕ ಸೇತುವೆ ಮುಳುಗಡೆ

ಪುತ್ತೂರು ಜುಲೈ 18: ಕರಾವಳಿಯಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಪುತ್ತೂರು -ಪರ್ಲಡ್ಕ-ಪಾಣಾಜೆ ರಸ್ತೆಯ ಬೆಟ್ಟಂಪಾಡಿ ಗ್ರಾಮದ ಚೆಲ್ಯಡ್ಕ ಸೇತುವೆ ಮುಳುಗಡೆಯಾಗಿದ್ದು, ಈ ಬಾರಿಯ ಮಳೆಗಾಲದಲ್ಲಿ ಸೇತುವೆ ಎರಡನೇ ಸಲ ಮುಳುಗಡೆಯಾಗುತ್ತಿದೆ.


ಹೊಸ್ಮಠ ಸೇತುವೆ ನಂತರ ಮುಳುಗು ಸೇತುವೆ ಎಂದೇ ಗುರುತಿಸಿಕೊಂಡಿರುವ ಹಾಗೂ ಕುಸಿಯುತ ಹಂತಕ್ಕೆ ತಲುಪಿರುವ ಚೆಲ್ಯಡ್ಕ ಸೇತುವೆ ಪ್ರತಿ ವರ್ಷ ಮಳೆಗಾಲದಲ್ಲಿ ಜಲಾವೃತಗೊಳ್ಳುತ್ತಿದೆ. ಕಳೆದ ವರ್ಷದ ಮಳೆಗಾಲದಲ್ಲೂ 4 ಬಾರಿ ಜಲಾವೃತಗೊಂಡಿತ್ತು.
ಸೇತುವೆ ಜಲಾವೃತಗೊಂಡಿರುವುದರಿಂದ ಪುತ್ತೂರಿನಿಂದ ಪರ್ಲಡ್ಕ-ಕುಂಜೂರುಪಂಜ-ಗುಮ್ಮಟೆಗದ್ದೆ ಮೂಲಕವಾಗಿ ಬೆಟ್ಟಂಪಾಡಿ-ಪಾಣಾಜೆ ಕಡೆಗೆ ತೆರಳುವ ವಾಹನ ಸಂಚಾರಕ್ಕೆ ಅಡಚಣೆಯಾಗಿದೆ.


ಪುತ್ತೂರು -ಪರ್ಲಡ್ಕ-ಕುಂಜೂರುಪಂಜ-ದೇವಸ್ಯ-ಪಾಣಾಜೆ ರಸ್ತೆಯಲ್ಲಿ ಖಾಸಗಿ ಬಸ್ಸುಗಳ ಮಾತ್ರ ವ್ಯವಸ್ಥೆ ಇದ್ದು, ಚೆಲ್ಯಡ್ಕ ಸೇತುವೆ ಮುಳುಗಡೆಯಾದ ಪರಿಣಾಮವಾಗಿ ಈ ಬಸ್ಸುಗಳು ಮಾತ್ರವಲ್ಲದೆ ಖಾಸಗಿ ವಾಹನಗಳು ಪುತ್ತೂರಿನಿಂದ ಸಂಟ್ಯಾರು-ಕೈಕಾರ ಮೂಲಕವಾಗಿ ಸುತ್ತುಬಳಸಿ ತೆರಳಬೇಕಾಗಿ ಬಂದಿದೆ. ಇದರಿಂದಾಗಿ ಖಾಸಗಿ ಬಸ್ಸುಗಳನ್ನೇ ಅವಲಂಬಿಸಿಕೊಂಡಿರುವ ಈ ಭಾಗದ ಜನತೆ ತೊಂದರೆಗೀಡಾಗಿದ್ದಾರೆ.

Advertisement
Click to comment

You must be logged in to post a comment Login

Leave a Reply