BELTHANGADI
ನಿಷೇಧ ಇದ್ದರೂ ಚಾರ್ಮಾಡಿ ಟ್ರೆಕ್ಕಿಂಗ್ ಹೋಗಿ ನಾಪತ್ತೆಯಾಗಿದ್ದ ಯುವಕ ಪತ್ತೆ
ಮಂಗಳೂರು, ಫೆಬ್ರವರಿ 26: ರಾಜ್ಯ ಸರಕಾರ ಈಗಾಗಲೇ ಅರಣ್ಯ ಪ್ರದೇಶಗಳಿಗೆ ಟ್ರಕ್ಕಿಂಗ್ ಹೋಗುವುದಕ್ಕೆ ನಿರ್ಬಂಧ ಹೇರಿದೆ. ಆದರೂ ಪೊಲೀಸ್ ಅಧಿಕಾರಿಯೊಬ್ಬರ ಪ್ರಭಾವ ಬಳಸಿ ಚಾರ್ಮಾಡಿ ಅರಣ್ಯಕ್ಕೆ ಟ್ರೆಕ್ಕಿಂಗ್ ಹೋಗಿ ನಾಪತ್ತೆಯಾಗಿದ್ದ ಯುವಕ ಬಾಳೂರು ಪೊಲೀಸ್ ಠಾಣಾ ವ್ಯಾಪ್ತಿಯ ಬಲ್ಲಾಳರಾಯದುರ್ಗ ಬಳಿ ಪತ್ತೆಯಾಗಿದ್ದಾರೆ.
ನಾಪತ್ತೆಯಾಗಿದ್ದ ಯುವಕ ಧನುಷ್ ಎಂದು ಗುರುತಿಸಲಾಗಿದೆ. ಈತ ಡಿವೈಎಸ್ಪಿ ಅಧಿಕಾರಿಯೊಬ್ಬರ ಶಿಫಾರಸ್ಸು ಬಳಸಿ ಬೆಂಗಳೂರು ಮೂಲದ 10 ಜನ ವಿದ್ಯಾರ್ಥಿಗಳು ಫೆಬ್ರವರಿ 25 ರವಿವಾರ ರ ಸಂಜೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಅರಣ್ಯದಲ್ಲಿ ಚಾರಣಕ್ಕೆ ತೆರಳಿದ್ದರು. ಈ ವೇಳೆ ಧನುಷ್ ನಾಪತ್ತೆಯಾಗಿದ್ದನು. ಈ ತಂಡದಲ್ಲಿದ್ದ ಓರ್ವ ಯುವಕ ಧರ್ಮಸ್ಥಳ ಮತ್ತು ಬೆಳ್ತಂಗಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.
ಬಳಿಕ ಧರ್ಮಸ್ಥಳ ಮತ್ತು ಬೆಳ್ತಂಗಡಿ ಪೊಲೀಸರು ಮತ್ತು ಅರಣ್ಯಾಧಿಕಾರಿಗಳು ಜಂಟಿಯಾಗಿ ಹುಡುಕಾಟ ನಡೆಸಿದ್ದಾರೆ. ಈ ವೇಳೆ ನಾಪತ್ತೆಯಾದ ಯುವಕರ ಮೊಬೈಲ್ ನೆಟ್ವರ್ಕ್ ಪತ್ತೆಯಾಗಿ ಮತ್ತೆ ಸಂಪರ್ಕ ಕಡಿತವಾಗಿತ್ತು. ಕೊನೆಗೆ ಧನುಷ್ ಮಧ್ಯರಾತ್ರಿ ಪತ್ತೆಯಾಗಿದ್ದಾನೆ.
You must be logged in to post a comment Login