Connect with us

    BELTHANGADI

    ನಿಷೇಧ ಇದ್ದರೂ ಚಾರ್ಮಾಡಿ ಟ್ರೆಕ್ಕಿಂಗ್ ಹೋಗಿ ನಾಪತ್ತೆಯಾಗಿದ್ದ ಯುವಕ ಪತ್ತೆ

    ಮಂಗಳೂರು, ಫೆಬ್ರವರಿ 26: ರಾಜ್ಯ ಸರಕಾರ ಈಗಾಗಲೇ ಅರಣ್ಯ ಪ್ರದೇಶಗಳಿಗೆ ಟ್ರಕ್ಕಿಂಗ್ ಹೋಗುವುದಕ್ಕೆ ನಿರ್ಬಂಧ ಹೇರಿದೆ. ಆದರೂ ಪೊಲೀಸ್ ಅಧಿಕಾರಿಯೊಬ್ಬರ ಪ್ರಭಾವ ಬಳಸಿ ಚಾರ್ಮಾಡಿ ಅರಣ್ಯಕ್ಕೆ ಟ್ರೆಕ್ಕಿಂಗ್ ಹೋಗಿ ನಾಪತ್ತೆಯಾಗಿದ್ದ ಯುವಕ ಬಾಳೂರು ಪೊಲೀಸ್ ಠಾಣಾ ವ್ಯಾಪ್ತಿಯ ಬಲ್ಲಾಳರಾಯದುರ್ಗ ಬಳಿ ಪತ್ತೆಯಾಗಿದ್ದಾರೆ.


    ನಾಪತ್ತೆಯಾಗಿದ್ದ ಯುವಕ ಧನುಷ್​ ಎಂದು ಗುರುತಿಸಲಾಗಿದೆ. ಈತ ಡಿವೈಎಸ್​ಪಿ ಅಧಿಕಾರಿಯೊಬ್ಬರ ಶಿಫಾರಸ್ಸು ಬಳಸಿ ಬೆಂಗಳೂರು ಮೂಲದ 10 ಜನ ವಿದ್ಯಾರ್ಥಿಗಳು ಫೆಬ್ರವರಿ 25  ರವಿವಾರ  ರ ಸಂಜೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಅರಣ್ಯದಲ್ಲಿ ಚಾರಣಕ್ಕೆ ತೆರಳಿದ್ದರು. ಈ ವೇಳೆ ಧನುಷ್​ ನಾಪತ್ತೆಯಾಗಿದ್ದನು. ಈ ತಂಡದಲ್ಲಿದ್ದ ಓರ್ವ ಯುವಕ ಧರ್ಮಸ್ಥಳ ಮತ್ತು ಬೆಳ್ತಂಗಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.

    ಬಳಿಕ ಧರ್ಮಸ್ಥಳ ಮತ್ತು ಬೆಳ್ತಂಗಡಿ ಪೊಲೀಸರು ಮತ್ತು ಅರಣ್ಯಾಧಿಕಾರಿಗಳು ಜಂಟಿಯಾಗಿ ಹುಡುಕಾಟ ನಡೆಸಿದ್ದಾರೆ. ಈ ವೇಳೆ ನಾಪತ್ತೆಯಾದ ಯುವಕರ ಮೊಬೈಲ್ ನೆಟ್​ವರ್ಕ್ ಪತ್ತೆ‌ಯಾಗಿ ಮತ್ತೆ ಸಂಪರ್ಕ ಕಡಿತವಾಗಿತ್ತು. ಕೊನೆಗೆ ಧನುಷ್​​ ಮಧ್ಯರಾತ್ರಿ ಪತ್ತೆಯಾಗಿದ್ದಾನೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *