FILM
ಯೂಟ್ಯೂಬ್ ಚಾನೆಲ್ ಗಳಿಗೆ ನಿವೇದಿತಾ ಗೌಡ ವಾರ್ನಿಂಗ್

ಬೆಂಗಳೂರು ಜೂನ್ 10 : ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ಡೈವೋರ್ಸ್ ಕುರಿತಂತೆ ಸೋಶಿಯಲ್ ಮಿಡಿಯಾಗಳಲ್ಲಿ ವದಂತಿಗಳನ್ನು ಹಬ್ಬಲಾಗುತ್ತಿದ್ದು, ಇಂತವರ ವಿರುದ್ದ ಕಾನೂನಾತ್ಮಕ ಕ್ರಮಕೈಗೊಳ್ಳುತ್ತೇವೆ ಎಂದು ಗಾಯಕ ಚಂದನ್ ಶೆಟ್ಟಿ ಹಾಗೂ ಕಿರುತೆರೆ ಕಲಾವಿದೆ ನಿವೇದಿತಾ ಗೌಡ ಎಚ್ಚರಿಕೆ ನೀಡಿದ್ದಾರೆ.
ವಿಚ್ಛೇದನ ಪಡೆದುಕೊಂಡ ಬಳಿಕ ಸೋಮವಾರ ಜಂಟಿಯಾಗಿ ಸುದ್ದಿಗೋಷ್ಠಿ ನಡೆಸಿದ ಚಂದನ್–ನಿವೇದಿತಾ, ‘ನಾವು ಸ್ಪಷ್ಟನೆಗಳನ್ನು ನೀಡಿದ ಬಳಿಕವೂ ವದಂತಿಗಳನ್ನು ಹರಡಿದರೆ ಕಾನೂನಾತ್ಮಕ ಕ್ರಮ ಕೈಗೊಂಡು ಮಾನಹಾನಿ ಪ್ರಕರಣ ದಾಖಲಿಸುತ್ತೇವೆ’ ಎಂದು ಎಚ್ಚರಿಸಿದರು.

ಕೆಲವು ಯೂಟ್ಯೂಬ್ ಚಾನೆಲ್‌ಗಳು ವದಂತಿ ಫ್ಯಾಕ್ಟರಿಗಳಾಗುತ್ತಿವೆ. ಇಂತಹ ಪರಿಸ್ಥಿತಿಯನ್ನು ಬಂಡವಾಳ ಮಾಡಿಕೊಳ್ಳುತ್ತಿವೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು. ನಿವೇದಿತಾ ಮಾತನಾಡಿ, ‘ಮದುವೆ ನಮ್ಮ ವೃತ್ತಿ ಜೀವನಕ್ಕೆ ಅಡ್ಡಿಯಾಗಿಲ್ಲ. ವದಂತಿಗಳು ನಮಗಷ್ಟೇ ಅಲ್ಲದೆ ನಮ್ಮ ಕುಟುಂಬಕ್ಕೂ ನೋವು ತಂದಿವೆ. ಯಾರ ಜೊತೆಗಾದರೂ ಪೋಸ್ಟ್ ಹಾಕಿದ ತಕ್ಷಣ ವ್ಯೂವ್ಸ್‌ಗಳಿಗಾಗಿ ಸಂಬಂಧ ಕಲ್ಪಿಸುತ್ತಾರೆ. ಇದು ಮನಸ್ಸಿಗೆ ನೋವಾಗುತ್ತದೆ. ನಾನೂ ಹಾಗೂ ಚಂದನ್ ಒಳ್ಳೆಯ ಗೆಳೆಯರು. ನಮ್ಮ ನಮ್ಮ ವೃತ್ತಿಯಲ್ಲಿ ಒಬ್ಬರಿಗೊಬ್ಬರು ಬೆಂಬಲವಾಗಿ ಇರುತ್ತೇವೆ. ವಿಚ್ಛೇದನ ನಿರ್ಧಾರದ ಬಗ್ಗೆ ಯಾವುದೇ ವಿಷಾದ ಇಲ್ಲ’ ಎಂದರು.