Connect with us

    LATEST NEWS

    ಬೋಳಿಯಾರು ಮಸೀದಿ ಎದುರು ಪ್ರಚೋದನಕಾರಿಯಾಗಿ ಘೋಷಣೆ – ಐವರ ವಿರುದ್ದ ದೂರು ದಾಖಲು

    ಮಂಗಳೂರು ಜೂನ್ 10: ಪ್ರಧಾನಿ ನರೇಂದ್ರ ಮೋದಿ ಪ್ರಮಾಣ ವಚನ ಸಂದರ್ಭ ನಡೆದ ವಿಜಯೋತ್ಸವದ ವೇಳೆ ನಡೆದ ಚೂರಿ ಇರಿತ ಪ್ರಕರಣದಲ್ಲಿ ಇದೀಗ ಮತ್ತೊಂದು ಟ್ವಿಸ್ಟ್ ಸಿಕ್ಕಿದ್ದು, ಚೂರಿ ಇರಿದ ಆರೋಪಿಗಳು ಅರೆಸ್ಟ್ ಆಗುತ್ತಿದ್ದಂತೆ ಇದೀಗ ಬೋಳಿಯಾರು ಜುಮ್ಮಾ ಮಸೀದಿ ಕಮಿಟಿಯ ಅಧ್ಯಕ್ಷ ಪಿ.ಕೆ ಅಬ್ದುಲ್ಲಾ ನೀಡಿದ ದೂರಿನಂತೆ ಕೋಣಾಜೆ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದೆ.


    ಬಿಜೆಪಿ ಕಾರ್ಯಕರ್ತರ ವಿಜಯೋತ್ಸವದ ಬಳಿಕ ಕೆಲವು ಕಾರ್ಯಕರ್ತರು ಮಸೀದಿ ಮುಂಭಾಗದಲ್ಲಿ ಭಾರತ್ ಮಾತಾ ಕೀ ಜೈ ಎಂದು ಘೋಷಣೆ ಕೂಗಿದ್ದರು. ಆಮೂಲಕ ಅಲ್ಲಿದ್ದ ಮುಸ್ಲಿಂ ಕಾರ್ಯಕರ್ತರನ್ನು ಪ್ರಚೋದಿಸಿದ್ದಾರೆಂದು ದೂರಿನಲ್ಲಿ ತಿಳಿಸಿದ್ದು, ಇದರ ಸಿಸಿಟಿವಿ ವಿಡಿಯೋವನ್ನೂ ಮಸೀದಿಯವರು ಬಿಡುಗಡೆ ಮಾಡಿದ್ದಾರೆ. ದೂರು ಆಧರಿಸಿ ಪೊಲೀಸರು ಸೆಕ್ಷನ್ 143, 147, 148, 153ಎ, 504, 506, 149 ಅಡಿ ಪ್ರಕರಣ ದಾಖಲಿಸಿದ್ದಾರೆ. ಸುರೇಶ್, ವಿನಯ್, ಸುಭಾಶ್, ರಂಜಿತ್, ಧನಂಜಯ ಆರೋಪಿಗಳೆಂದು ಹೆಸರಿಸಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply