Connect with us

    KARNATAKA

    ಚಾಮರಾಜನಗರ : ಕಬಿನಿ ನಾಲೆಯಲ್ಲಿ ಬಿದ್ದು ವಿದ್ಯಾರ್ಥಿ ಮೃತ್ಯು..!

    ಚಾಮರಾಜನಗರ : ಪ್ರೌಢ ಶಾಲಾ ವಿದ್ಯಾರ್ಥಿಯೊಬ್ಬ ಕಬಿನಿ ನಾಲೆಯಲ್ಲಿ ಕಾಲು ಜಾರಿ ಬಿದ್ದು ಮೃತಪಟ್ಟಿರುವ ಘಟನೆ ಚಾಮರಾಜನಗರ(Chamarajanagar) ತಾಲ್ಲೂಕಿನ ಬಸವಟ್ಟಿ ಗ್ರಾಮದಲ್ಲಿ ನಡೆದಿದೆ.

     

    ಬಸವಟ್ಟಿ ಗ್ರಾಮದ ಮಹದೇವಮ್ಮ ಎಂಬುವವರ ಪುತ್ರ ವೈ.ಎನ್.ರೋಹಿತ್ (14) ಮೃತ ವಿದ್ಯಾರ್ಥಿ. ಈತ ಸಂತೇಮರಹಳ್ಳಿಯ ಸರಕಾರಿ ಪ್ರೌಢಶಾಲೆಯಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಬುಧವಾರ ಸಂಜೆ ಕಬಿನಿ 42ರ ಉಪ ನಾಲೆ ಕಡೆ ತೆರಳಿದ್ದಾನೆ. ಈ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ನಾಲೆಗೆ ಬಿದ್ದು ಮೃತಪಟ್ಟಿದ್ದಾನೆ ಎನ್ನಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply