FILM
ನನ್ನಂತವಳು ಬಿಗ್ ಬಾಸ್ ಗೆ ಬರಬಾರದಿತ್ತು..ಬಂದು ತಪ್ಪು ಮಾಡಿಬಿಟ್ಟೆ – ಚೈತ್ರಾ ಕುಂದಾಪುರ
ಬೆಂಗಳೂರು ಡಿಸೆಂಬರ್ 24: ಬಿಗ್ಬಾಸ್ ನನಗೆ ಅಲ್ಲ. ತಪ್ಪು ನಿರ್ಧಾರ ತೆಗೆದುಕೊಂಡೆ. ಶಾಲೆಗೆ ಹೋಗುವವರು ಶಾಲೆಗೆ ಹೋಗಬೇಕು. ದೇವಸ್ಥಾನಕ್ಕೆ ಹೋಗುವವರು ಶಾಲೆಗೆ ಹೋಗಬೇಕು. ಪಬ್ಗೆ ಹೋಗುವವರು ಪಬ್ಗೆ ಹೋಗಬೇಕು. ನನ್ನಂಥವಳು ಇಲ್ಲಿಗೆ ಬರಬಾರದಾಗಿತ್ತು ಎಂದು ಚೈತ್ರಾ ಕುಂದಾಪುರ ಅವರು ಹೇಳಿದ್ದಾರೆ.
ಬಿಗ್ ಬಾಸ್ ಗೆ ಹಿಂದೂ ಫೈರ್ ಬ್ರ್ಯಾಂಡ್ ಎಂದು ಎಂಟ್ರಿ ಕೊಟ್ಟಿದ್ದ ಚೈತ್ರಾ ಕುಂದಾಪುರ ಬಿಗ್ ಬಾಸ್ ಮನೆಯಲ್ಲಿ ಸಂಪೂರ್ಣ ಕಾಮಿಡಿ ಪೀಸ್ ಆಗಿ ಬಿಟ್ಟಿದ್ದಾರೆ. ತಮ್ಮ ಮಾತುಗಳಿಂದಲೇ ಸಂಘಟನೆಯಲ್ಲಿ ಉಗ್ರ ಭಾಷಣಗಾರ್ತಿ ಎಂದು ಕರೆಸಿಕೊಂಡಿದ್ದ ಚೈತ್ರಾ ಬಿಗ್ ಬಾಸ್ ಮನೆಯಲ್ಲಿ ತಮ್ಮ ಮಾತುಗಳಿಂದಲೇ ಸಮಸ್ಯೆ ತಂದುಕೊಳ್ಳುತ್ತಿದ್ದಾರೆ. ಪ್ರತಿ ಬಾರಿಯೂ ಕಿಚ್ಚ ಸುದೀಪ್ ಅವರಿಂದ ಕ್ಲಾಸ್ ತೆಗೆದುಕೊಳ್ಳುತ್ತಿರುವ ಚೈತ್ರಾ , ತಾವು ಹೇಳುತ್ತಿರುವ ಕೆಲವು ಸುಳ್ಳುಗಳಿಂದಲೂ ಮನೆಯ ಒಳಗೂ ಹೊರಗೂ ತಮಾಷೆಗೆ ಒಳಗಾಗುತ್ತಿದ್ದಾರೆ. ಈ ನಡುವೆ ಸ್ವತಃ ಚೈತ್ರಾ ಅವರಿಗೂ ತಮ್ಮ ಸ್ಥಿತಿ ಅರಿವಾದಂತಿದೆ.
ಇಲ್ಲಿನ ಪರಿಸ್ಥಿತಿಯನ್ನು ಎದುರಿಸಬೇಕು ಅಂತ ತುಂಬಾ ಸಲ ಅಂದುಕೊಳ್ಳುತ್ತೇನೆ. ಆದರೆ ಆಗಲ್ಲ. ನನ್ನ ಮಾತು ಕಿರಿಕಿರಿ ಅಂತ ಯಾರೂ ಹೇಳಿರಲಿಲ್ಲ. ಮಾತು ನನಗೆ ಅನ್ನ ಕೊಟ್ಟಿದೆ, ಬದುಕನ್ನು ಕೊಟ್ಟಿದೆ. ಕಿರಿಕಿರಿ ಅಂತ ಯಾರೂ ಹೇಳಿರಲಿಲ್ಲ ಎಂದು ಹೇಳಿಕೊಂಡು ಚೈತ್ರಾ ಕುಂದಾಪುರ ಅವರು ಕಣ್ಣೀರು ಹಾಕಿದ್ದಾರೆ. ಆಗ ಭವ್ಯಾ ಗೌಡ ಚೈತ್ರಾಗೆ ಅವರಿಗೆ ಸಮಾಧಾನ ಮಾಡಿ ಬುದ್ಧಿ ಮಾತು ಹೇಳಿದ್ದಾರೆ.