Connect with us

FILM

ಅಪ್ಪನನ್ನೇ ಮದುವೆಗೆ ಕರೆಯದ ಚೈತ್ರಾ ಕುಂದಾಪುರ – ಕಳ್ಳರು ಕಳ್ಳರು ಮದುವೆಯಾಗಿದ್ದಾರೆ ಆಕೆ ನನ್ನನ್ನು ಕರೆದಿಲ್ಲ ಎಂದ್ರು ಚೈತ್ರಾ ಅಪ್ಪ

ಉಡುಪಿ ಮೇ 15: ಸದಾ ವಿವಾದಗಳಿಂದ ಸುದ್ದಿಯಲ್ಲಿರುತ್ತಿದ್ದ ಚೈತ್ರಾ ಕುಂದಾಪುರ ಇದೀಗ ಮದುವೆಯಾದ ಬೆನ್ನಲ್ಲೇ ಮತ್ತೊಂದು ವಿವಾದಕ್ಕೆ ಸಿಲುಕಿದ್ದಾರೆ. ಸ್ವಂತ ತಂದೆಯನ್ನೇ ಚೈತ್ರಾ ಕುಂದಾಪುರ ಮದುವೆಗೆ ಕರೆದಿಲ್ಲವೆಂದು ಅವರ ತಂದೆ ಬಾಲಕೃಷ್ಣ ನಾಯ್ಕ್‌ ಸಾಲು ಸಾಲು ಆರೋಪವನ್ನು ಮಾಡಿದ್ದಾರೆ.


ʻಬಿಗ್‌ ಬಾಸ್‌ ಕನ್ನಡ ಸೀಸನ್‌ 11ರʼ ಸ್ಪರ್ಧಿ ಚೈತ್ರಾ ಕುಂದಾಪುರ ಇತ್ತೀಚೆಗೆ ಪ್ರೀತಿಸಿದ ಹುಡುಗನ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಗುರು ಹಿರಿಯರ ಸಮ್ಮುಖದಲ್ಲಿಯೇ ಚೈತ್ರಾ ಕುಂದಾಪುರ-ಶ್ರೀಕಾಂತ್‌ ಕಶ್ಯಪ್‌ ಅವರ ಮದುವೆ ನಡೆದಿದೆ. ಆದರೆ ತನ್ನ ತಂದೆಯನ್ನೆ ಮದುವೆಗೆ ಕರೆದಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದಬಾಲಕೃಷ್ಣ ನಾಯ್ಕ್‌ ಸಾಲು ಸಾಲು ಆರೋಪವನ್ನು ಮಾಡಿದ್ದಾರೆ.

ಮಾಧ್ಯಮಗಳೊಟ್ಟಿಗೆ ಮದುವೆಗೆ ಯಾಕೆ ಹೋಗಲಿಲ್ಲ ಎಂಬ ಪ್ರಶ್ನೆಗೆ ಚೈತ್ರಾ ಕುಂದಾಪುರ ತಂದೆ ಬಾಲಕೃಷ್ಣ ನಾಯ್ಕ್‌ ಉತ್ತರಿಸಿದ್ದಾರೆ. “ಕಳ್ಳರು ಕಳ್ಳರು ಮದುವೆಯಾಗಿದ್ದಾರೆ. ಆಕೆ ನನ್ನನ್ನು ಕರೆದಿಲ್ಲ ನಾನು ಮದುವೆಗೆ ಹೋಗಿಲ್ಲ. ಈ ಮದುವೆಯನ್ನು ನಾನು ಒಪ್ಪಲಾರೆ, ಚೈತ್ರಾ ಮತ್ತು ಆಕೆಯ ಪತಿ ಇಬ್ಬರೂ ಕಳ್ಳರು. ನನ್ನ ಪತ್ನಿ ಕೂಡ ಚೈತ್ರಾ ಬೆಂಬಲಕ್ಕೆ ನಿಂತಿದ್ದಾಳೆ. ಇವರೆಲ್ಲ ಹಣದ ಆಸೆಗಾಗಿ ಹೀಗೆ ಮಾಡುತ್ತಿದ್ದಾರೆ.ಎರಡು ಕ್ವಾಟರ್ ನಾನು ಕೊಟ್ರೆ ನನ್ನ ಮಕ್ಕಳು ದೇವರು ಅನ್ನುವವರ ಮಾತಿಗೆ ಬೆಲೆ ಕೊಡುವವರು ಮೂರ್ಖರಾಗ್ತಾರೆ – ಚೈತ್ರಾ ಕುಂದಾಪುರ

ಗೋವಿಂದ ಬಾಬು ಪೂಜಾರಿ ಪ್ರಕರಣದಲ್ಲೂ ಇವರು ಹಣ ಹಂಚಿಕೊಂಡಿದ್ದಾರೆ. ನನಗೆ ನನ್ನ ದೊಡ್ಡ ಮಗಳು ಮಾತ್ರ ಆಸರೆ. ನನ್ನ ದೊಡ್ಡ ಮಗಳು ಗಾಯತ್ರಿ ನಿರಪರಾಧಿ. ನಾನು ಮತ್ತು ನನ್ನ ದೊಡ್ಡ ಮಗಳು ಮರ್ಯಾದೆಯಿಂದ ಬದುಕುತ್ತಿದ್ದೇವೆ. ನಾನು ಕಟ್ಟಿದ ಮನೆಯಲ್ಲಿ ಈಗ ನಾನೇ ಅನಾಥ. ಚೈತ್ರಾ ಮಾತಿಗೂ ಕೃತಿಗೂ ಸಂಬಂಧವೇ ಇಲ್ಲ. ಆಕೆಗೆ ಯಾರು ದೊಡ್ಡ ಸ್ಥಾನಮಾನ ಕೊಡಬೇಡಿ” ಎಂದು ಬಾಲಕೃಷ್ಣ ನಾಯ್ಕ್‌, ಮಗಳು ಚೈತ್ರಾ ಕುಂದಾಪುರ ವಿರುದ್ಧ ಸಾಲು ಸಾಲು ಆರೋಪಿ ಮಾಡಿದ್ದಾರೆ.

Share Information
Continue Reading
Advertisement
2 Comments

2 Comments

  1. Pingback: ಎರಡು ಕ್ವಾಟರ್ ನಾನು ಕೊಟ್ರೆ ನನ್ನ ಮಕ್ಕಳು ದೇವರು ಅನ್ನುವವರ ಮಾತಿಗೆ ಬೆಲೆ ಕೊಡುವವರು ಮೂರ್ಖರಾಗ್ತಾರೆ - ಚೈತ್ರ

Leave a Reply

Your email address will not be published. Required fields are marked *