FILM
ಇವರಪ್ಪನಿಗೆ ಹೊಡೆದು ಕೇಸ್ ಹಾಕಿಸಿಕೊಂಡಿಲ್ಲ… ಅಪ್ಪನಿಗೆ ಹುಟ್ಟಿದ್ರೆ ನನ್ನ ಎದುರು ಬಂದು ಮಾತನಾಡಲಿ – ಬಿಗ್ ಬಾಸ್ ನಲ್ಲಿ ಚೈತ್ರಾ ಕುಂದಾಪುರ ಅವಾಜ್

ಬೆಂಗಳೂರು ಅಕ್ಟೋಬರ್ 15: ಬಿಗ್ ಬಾಸ್ ನಲ್ಲಿ ಒಂದು ವಾರದ ಹಿಂದೆ ಸೈಲೆಂಟ್ ಆಗಿದ್ದ ಚೈತ್ರಾ ಕುಂದಾಪುರ ಇದೀಗ ಮತ್ತೆ ಫಾರಂಗೆ ಬಂದಿದ್ದಾರೆ. ಜಗದೀಶ್ ಹಾಗೂ ಚೈತ್ರಾ ನಡುವೆ ನಡೆದ ಮಾತಿನ ಚಕಮಕಿಯಲ್ಲಿ ಜಗದೀಶ್ ಸರಿಯಾಗೆ ಟಕ್ಕರ್ ಕೊಟ್ಟಿದ್ದಾರೆ ಚೈಕು.
ಬಿಗ್ ಬಾಸ್ ನಲ್ಲಿ ಕಳೆದ ವಾರ ಸೈಲೆಂಟ್ ಆಗಿದ್ದರು. ಸುದೀಪ್ ಕೂಡ ಕೇಳಿದ್ದಕ್ಕೆ ನಾನು ಬೆಂಕಿ ಹಚ್ಚುತ್ತೀನಿ ಎಂದಿದ್ದರು. ಇದೀಗ ಅದರಂತೆ ಜಗದೀಶ್ ವಿರುದ್ದ ಕೆಂಡಕಾರಿದ್ದಾರೆ. ಕಲರ್ಸ್ ಕನ್ನಡದಲ್ಲಿ ಈ ಕುರಿತು ಹೊಸ ಪ್ರೋಮೋ ಹಾಕಲಾಗಿದೆ.

ಚೈತ್ರಾ ಹಾಗೂ ಜಗದೀಶ್ ಮಧ್ಯೆ ಯಾವುದೋ ವಿಚಾರಕ್ಕೆ ಕಿರಿಕ್ ಆಗಿದೆ. ‘ನನಗೆ ಫಾಲೋವರ್ಸ್ ಇದಾರೆ. ಆಕೆ ಮೇಲೆ 28 ಕೇಸ್ ಇದೆ’ ಎಂದರು ಜಗದೀಶ್. ಇದು ಚೈತ್ರಾ ಅವರನ್ನು ಕೆರಳಿಸಿತು. ‘ತಾಕತ್ ಇದ್ರೆ ನನ್ನ ಎದುರಿಗೆ ಬಂದು ಮಾತನಾಡಲಿ. ನನ್ ಕೇಸ್ ಬಗ್ಗೆ ಮಾತನಾಡೋ ಅಧಿಕಾರ ಯಾರಿಗೂ ಇಲ್ಲ. 50 ಅಲ್ಲ 100 ಕೇಸ್ ಹಾಕಿಸಿಕೊಳ್ಳುತ್ತೇನೆ. ಇವರಪ್ಪನಿಗೆ ಹೊಡೆದು ಕೇಸ್ ಹಾಕಿಸಿಕೊಂಡಿಲ್ಲ. ಅಪ್ಪನಿಗೆ ಹುಟ್ಟಿದ್ರೆ ನನ್ನ ಎದುರು ಬಂದು ಮಾತನಾಡಲಿ’ ಎಂದು ಸವಾಲು ಹಾಕಿದ್ದಾರೆ ಚೈತ್ರಾ.
ನೀನಾ? ನಾನಾ? ಅಂತ ವಾಗ್ಯುದ್ಧಕ್ಕೆ ನಿಂತ ಜಗದೀಶ್ ಹಾಗೂ ಚೈತ್ರಾ
ಬಿಗ್ ಬಾಸ್ ಕನ್ನಡ ಸೀಸನ್ 11 | ಸೋಮ-ಶುಕ್ರ ರಾತ್ರಿ 9:30
#BiggBossKannada11 #BBK11 #HosaAdhyaya #ColorsKannada #BannaHosadaagideBandhaBigiyaagide #ಕಲರ್ಫುಲ್ಕತೆ #colorfulstory #Kicchasudeepa pic.twitter.com/EddlBod83z— Colors Kannada (@ColorsKannada) October 15, 2024