FILM
ಟಾಸ್ಕ್ ನಲ್ಲಿ ಉಂಗುರ ಕಳೆದುಕೊಂಡ ಚೈತ್ರಾ – ಕೊರಗಜ್ಜನಿಗೆ ಪ್ರಾರ್ಥಿಸಿದ ಬಳಿಕ ಸಿಕ್ಕ ಉಂಗುರ
ಬೆಂಗಳೂರು ನವೆಂಬರ್ 14: ಬಿಗ್ ಬಾಸ್ ಸೀಸನ್ 11 ರಲ್ಲಿ ಚೈತ್ರಾ ಕುಂದಾಪುರ ಟಾಸ್ಕ್ ಒಂದರಲ್ಲಿ ತಮ್ಮ ಚಿನ್ನದ ಉಂಗುರ ಕಳೆದುಕೊಂಡಿದ್ದು, ಮನಸ್ಸಿನಲ್ಲಿ ಕೊರಗಜ್ಜನ ಪ್ರಾರ್ಥಿಸಿದ ಬಳಿಕ ಉಂಗುರು ಮರಳಿ ಸಿಕ್ಕಿದೆ.
ಬುಧವಾರದ ಸಂಚಿಕೆಯಲ್ಲಿ ಒಂದು ಟಾಸ್ಕ್ ನೀಡಲಾಗಿತ್ತು. ಹಸಿ ಮಣ್ಣಿನ ರಾಶಿಯಲ್ಲಿ ಆಟ ಆಡಬೇಕಿತ್ತು. ಈ ವೇಳೆ ಚೈತ್ರಾ ಕುಂದಾಪುರ ಅವರ ಚಿನ್ನದ ಉಂಗುರ ಕಳೆದುಹೋಯಿತು. ಉಂಗುರ ಮಿಸ್ ಆಗಿದೆ ಎಂಬುದು ಗೊತ್ತಾದ ತಕ್ಷಣ ಅವರು ಸಿಕ್ಕಾಪಟ್ಟೆ ಚಡಪಡಿಸಿದರು. ಆಗ ಅವರು ಮನಸ್ಸಿನಲ್ಲಿ ಕೊರಗಜ್ಜನ ಪ್ರಾರ್ಥನೆ ಮಾಡಿದರು.
ಇದು ಚೈತ್ರಾ ಪಾಲಿಗೆ ತುಂಬ ಮಹತ್ವದ ಉಂಗುರ. ಹಾಗಾಗಿ ಅವರು ಉಂಗುರ ಕಳೆದಕೊಂಡ ತಕ್ಷಣ ಆತಂಕಕ್ಕೆ ಒಳಗಾದರು. ರಾಶಿ ರಾಶಿಯಾಗಿ ಬಿದ್ದಿದ್ದ ಹಸಿ ಮಣ್ಣಿನಲ್ಲಿ ಚಿಕ್ಕ ಉಂಗುರ ಹುಡುಕುವುದು ನಿಜಕ್ಕೂ ಸವಾಲಿನ ಕೆಲಸ. ಅಷ್ಟು ದೊಡ್ಡದಾದ ಬಿಗ್ ಬಾಸ್ ಮನೆಯಲ್ಲಿ ಉಂಗುರ ಮಿಸ್ ಆದರೆ ಮತ್ತೆ ಸಿಗುತ್ತಾ ಎಂಬುದು ಎಲ್ಲರ ಅನುಮಾನ. ಆದರೂ ಕೂಡ ಎಲ್ಲರೂ ಹುಡುಕಲು ಪ್ರಯತ್ನಿಸಿದರು.
ತಮಗೆ ಈ ಉಂಗುರ ಎಷ್ಟು ಮುಖ್ಯವಾದದ್ದು ಎಂದು ಬಿಗ್ ಬಾಸ್ಗೆ ಚೈತ್ರಾ ಅವರು ಹೇಳಿದರು. ಅಲ್ಲದೇ, ಹೇಗಾದರೂ ಉಂಗುರ ಹುಡುಕಿಕೊಡಿ ಎಂದು ಮನವಿ ಮಾಡಿಕೊಂಡರು. ಕೆಲವೇ ಸಮಯದ ನಂತರ ಬಿಗ್ ಬಾಸ್ ಆ ಉಂಗುರವನ್ನು ಹುಡುಕಿ ಕಳಿಸಿಕೊಟ್ಟರು. ಉಂಗುರ ಸಿಕ್ಕ ಖುಷಿಯಲ್ಲಿ ಚೈತ್ರಾ ಅವರು ಕುಣಿದಾಡಿದರು. ಅಲ್ಲದೇ, ಕೊರಗಜ್ಜನಿಗೆ ಧನ್ಯವಾದ ತಿಳಿಸಿದರು.