LATEST NEWS
ಬ್ರಹ್ಮಾವರ – ಮಹಿಳೆಗೆ ಹಲ್ಲೆ ನಡೆಸಿ ಕರಿಮಣಿ ಸರ ಕಳ್ಳತನ ಮಾಡಿದ್ದ ಮೂವರು ಆರೋಪಿಗಳು ಅರೆಸ್ಟ್

ಬ್ರಹ್ಮಾವರ ಎಪ್ರಿಲ್ 27: ಮನೆಯ ಕಂಪೌಂಡ್ ನ ಹೊರಗೆ ನಿಂತಿದ್ದ ಮಹಿಳೆಯೊಬ್ಬರಿಗೆ ಹಲ್ಲೆ ನಡೆಸಿ ಅವರ ಕುತ್ತಿಗೆಯಲ್ಲಿದ್ದ ಕರಮಣಿ ಸರ ಕಳ್ಳತನ ಮಾಡಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತರನ್ನು ನಾರ್ತ್ ಗೋವಾದ ಪೊರ್ವರ್ಹಿಮಂ ನಿವಾಸಿ ಗೌರೀಶ ರೋಹಿದಾಸ್ ಕೆರ್ಕರ್(37), ವಿಜಯಪುರ ಜಿಲ್ಲೆಯ ಸಿಂಧಗಿ ತಾಲೂಕಿನ ಮುಹಿನುದ್ದೀನ್ ಬಾಗಲಕೋಟ್(31), ಮುಂಬೈ ವಿಲೆ ಪಾರ್ಲೆಯ ಸುರ್ಜಿತ್ ಗೌತಮ್ ಕಾರ್(27) ಎಂದು ಗುರುತಿಸಲಾಗಿದೆ. ಎಪ್ರಿಲ್ 26 ರಂದು ಬ್ರಹ್ಮಾವರ ಆದರ್ಶ ನಗರದ ಪದ್ಮಾ(70) ಎಂಬವರು ಮನೆಯ ಕಂಪೌಂಡಿನ ಹೊರಗಡೆ ರಸ್ತೆಯಲ್ಲಿ ಹೂವುಗಳನ್ನು ಕೊಯ್ಯುತ್ತಿರುವಾಗ ಕಾರಿನಲ್ಲಿ ಬಂದ ಆರೋಪಿಗಳು, ಪದ್ಮಾರಿಗೆ ಹಲ್ಲೆ ನಡೆಸಿ, ಕುತ್ತಿಗೆಯಲ್ಲಿದ್ದ ಸುಮಾರು 40 ಗ್ರಾಮ್ ತೂಕದ 2,50,000 ರೂ. ಮೌಲ್ಯದ ಚಿನ್ನದ ಕರಿಮಣಿ ಸರವನ್ನು ಕಳವು ಮಾಡಿ ಪರಾಗಿಯಾಗಿದ್ದರು. ಇದರಿಂದ ಪದ್ಮ ತೀವ್ರವಾಗಿ ಗಾಯಗೊಂಡಿದ್ದರು. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ತನಿಖೆ ನಡೆಸಿದ ಪೊಲೀಸರು ಯಲ್ಲಾಪುರದಲ್ಲಿ ಎಪ್ರಿಲ್ 26ರಂದು ಸಂಜೆ ಆರೋಪಿಗಳನ್ನು ವಶಕ್ಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
1 Comment