KARNATAKA
ಬಿಎಸ್ ಸಿ ಅಗ್ರಿಕಲ್ಚರ್ ನಲ್ಲಿ ಮಂಗಳೂರಿನ ಎಕ್ಸ್‌ಪರ್ಟ್ ಕಾಲೇಜಿನ ವರುಣ್ ಗೌಡ ಪ್ರಥಮ

ಮಂಗಳೂರು ಅಗಸ್ಟ್ 21: ಸಿಇಟಿ ಪರೀಕ್ಷೆಯ ಫಲಿತಾಂಶ ಇಂದು ಪ್ರಕಟವಾಗಿದ್ದು, ಬಿಎಸ್ ಸಿ ಅಗ್ರಿಕಲ್ಚರ್ ನಲ್ಲಿ ಮಂಗಳೂರಿನ ಎಕ್ಸ್‌ಪರ್ಟ್ ಕಾಲೇಜಿನ ವರುಣ್ ಗೌಡ ಪ್ರಥಮ ಸ್ಥಾನ ಪಡೆದಿದ್ದಾರೆ. ಜೂನ್ 30ರಂದು ನಡೆದಿದ್ದ ಸಿಇಟಿ ಪರೀಕ್ಷೆಯ ಫಲಿತಾಂಶ ಇಂದು ಘೋಷಣೆಯಾಗಿದೆ. ಇಂಜಿನಿಯರಿಂಗ್ ವಿಭಾಗದಲ್ಲಿ ನಾಲ್ಕನೇ ಸ್ಥಾನವನ್ನು ಎಕ್ಸ್‌ಪರ್ಟ್ ಕಾಲೇಜಿನ ಶಶಾಂಕ್. ಪಿ ಪಡೆದುಕೊಂಡಿದ್ದಾರೆ.
ಈ ಬಗ್ಗೆ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಡಿಸಿಎಂ ಡಾ ಅಶ್ವಥ್ ನಾರಾಯಣ್, ಈ ವರ್ಷ ಪರೀಕ್ಷೆ ನಡೆದು 21ನೇ ದಿನಕ್ಕೆ ಪರೀಕ್ಷಾ ಫಲಿತಾಂಶ ನೀಡಿದ್ದೇವೆ . ಕರ್ನಾಟಕ ಪರೀಕ್ಷಾ ಮಂಡಳಿ ಕೆಸಿಇಟಿ 2020 ಫಲಿತಾಂಶವನ್ನು ಕೆಇಎ ಅಧಿಕೃತ ವೆಬ್ಸೈಟ್ cetonline.karnataka.gov.in/kea ನಲ್ಲಿ ಬಿಡುಗಡೆ ಮಾಡಿದೆ ಎಂದು ತಿಳಿಸಿದರು.

ಸಿಇಟಿ ಪರೀಕ್ಷೆಯು ಜು.30ರಿಂದ ಆಗಸ್ಟ್ 1ರವರೆಗೆ ನಡೆದಿದ್ದು, ಒಟ್ಟು 1.94 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಇದರ ಫಲಿತಾಂಶದ ಆಧಾರದಲ್ಲಿ ಇಂಜಿನಿಯರಿಂಗ್, ಕೃಷಿ, ಪಶು ವೈದ್ಯಕೀಯ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್ ಗಳಿಗೆ ಸರ್ಕಾರಿ ಕೋಟಾ ಸೀಟು ಹಂಚಿಕೆಯಾಗಲಿದೆ.
ಎಂಜಿನಿಯರಿಂಗ್ ವಿಭಾಗ
1. ರಕ್ಷಿತ್ ಎಂ – ಆರ್‌ವಿ ಕಾಲೇಜ್ ಬೆಂಗಳೂರು
2. ಶುಭನ – ಶ್ರೀ ಚೈತ್ಯನ್ಯ ಟೆಕ್ನೋ ಸ್ಕೂಲ್ ಬೆಂಗಳೂರು
3. ಎಂ ಶಶಾಂಕ್ ಬಾಲಾಜಿ – ಬೇಸ್ ಪಿಯು ಕಾಲೇಜ್ ಹುಬ್ಬಳ್ಳಿ
4. ಶಶಾಂಕ್ ಪಿ – ಎಕ್ಸ್‌ಪರ್ಟ್ ಪಿಯು ಕಾಲೇಜ್, ಮಂಗಳೂರು
5. ಸಂದೀಪ್ ನಾಸ್ಕರ್ – ಹೊರ ರಾಜ್ಯದ ವಿದ್ಯಾರ್ಥಿ
6. ನಕುಲ್ ಅಭಯ್ – ವಿದ್ಯಾನಿಕೇತನ ಕಾಲೇಜ್, ಹುಬ್ಬಳ್ಳಿ
7. ಎಸ್.ಶ್ರೀನಿವಾಸ್ – ಶ್ರೀ ಚೈತನ್ಯ ಟೆಕ್ನೋ ಸ್ಕೂಲ್ ಬೆಂಗಳೂರು
8. ಅದ್ವೈತ್ ಪ್ರಸಾದ್ – ಏರ್‌ಫೋರ್ಸ್ ಸ್ಕೂಲ್ ಹೆಬ್ಬಾಳ, ಬೆಂಗಳೂರು
9. ಗೌರೀಶ. ಕಜಂಪಾಡಿ – ವಿವೇಕಾನಂದ ಕಾಲೇಜ್, ಪುತ್ತೂರು
10 ದೀಪ್ತೀ ಎಸ್. ಪಾಟೀಲ್ – ಬೇಸ್ ಪಿಯು ಕಾಲೇಜ್, ಬೆಂಗಳೂರು
ಬಿಎಸ್‌ಸಿ ಆಗ್ರಿಕಲ್ಚರ್
1. ವರುಣ್ ಗೌಡ- ಎಕ್ಸ್‌ಪರ್ಟ್ ಪಿಯು ಕಾಲೇಜ್ , ಮಂಗಳೂರು
2. ಸಂಜನಾ ಕೆ – ಬೇಸ್ ಪಿಯು ಕಾಲೇಜ್ ಮೈಸೂರು
3. ಲೋಕೇಶ್ ಜೋಗಿ ಬಿ ಜೋಗಿ- ರಾಮಕೃಷ್ಣ ವಿದ್ಯಾ ಶಾಲಾ ಪಿಯು ಕಾಲೇಜ್
4. ಅರ್ಣವ್ ಅಯ್ಯಪ್ಪ – ಆಳ್ವಾಸ್ ಕಾಲೇಜ್, ಮೂಡಬಿದರೆ
5. ಪ್ರಜ್ವಲ್ ಕಶ್ಯಪ್ – ವಿದ್ಯಾಮಂದಿರ ಇಂದು ಪಿಯು ಕಾಲೇಜ್, ಬೆಂಗಳೂರು
6. ಚಿನ್ಮಯ್ ಎಸ್. ಭಾರಧ್ವಾಜ್ – ಸರ್ ಎಂವಿ ಪಿಯು ಕಾಲೇಜ್, ದಾವಣಗೆರೆ
7. ಪವನ್ ಎಸ್ ಗೌಡ – ನಾರಾಯಣ ಕಾಲೇಜ್ ಬೆಂಗಳೂರು
8. ಮಯೂರ್ ಎಸ್ – ಮಾಸ್ಟರ್ಸ್ ಪಿಯು ಕಾಲೇಜ್ ಹಾಸನ
9. ಎಚ್. ಗೌರೀಶ್ – ಎಕ್ಸ್‌ಪರ್ಟ್ ಪಿಯು ಕಾಲೇಜ್ ಮಂಗಳೂರು
10. ಜತೀನ್ ಎಲ್ ಡಿ – ಸಿಲ್ವರ್ ವ್ಯಾಲಿ ಪಬ್ಲಿಕ್ ಸ್ಕೂಲ್ ಬೆಂಗಳೂರು.
ಪಶು ವೈದ್ಯಕೀಯ ವಿಭಾಗ
1. ಸಾಯಿ ವಿವೇಕ್ ಪಿ – ನಾರಾಯಣ ಇ-ಟೆಕ್ನೋ ಸ್ಕೂಲ್, ಬೆಂಗಳೂರು
2. ಅರ್ಯನ್ ಮಹಾಲಿಂಗಪ್ಪ ಚನ್ನಾಲ್ – ಪ್ರಗತಿ ಪಬ್ಲಿಕ್ ಸೆಕಂಡರಿ ಸ್ಕೂಲ್, ಕೋಟಾ
3. ಸಂಜನಾ ಕೆ – ಬಿಎಎಸ್‍ಇ ಪಿಯು ಕಾಲೇಜ್, ಮೈಸೂರು
4. ಪವನ್.ಎಸ್.ಗೌಡ -ನಾರಾಯಣ ಪಿಯು ಕಾಲೇಜ್, ಬೆಂಗಳೂರು
5. ಅರ್ಣವ್ ಅಯ್ಯಪ್ಪ ಪಿ.ಪಿ – ಆಳ್ವಾಸ್ ಪಿಯು ಕಾಲೇಜ್, ಮೂಡುಬಿದ್ರೆ, ದಕ್ಷಿಣ ಕನ್ನಡ
6. ಎಂಡಿ ಅರ್ಬಾಜ್ ಅಹ್ಮದ್ – ಶಹೀನ್ ಇಂಡಿಪೆಂಡೆಂಟ್ ಪಿಯು ಕಾಲೇಜ್, ಬೀದರ್
7. ವರುಣ್ ಗೌಡ ಎಬಿ – ಎಕ್ಸ್‌ಪರ್ಟ್‌ಪಿಯು ಕಾಲೇಜ್, ಮಂಗಳೂರು
8. ಸುಮನ್ ಕೆ.ಎಸ್ – ನಾರಾಯಣ ಪಿಯು ಕಾಲೇಜ್, ಬೆಂಗಳೂರು
9. ಕಾರ್ತಿಕ್ ರೆಡ್ಡಿ -ಶಹೀನ್ ಇಂಡಿಪೆಂಡೆಂಟ್ ಪಿಯು ಕಾಲೇಜ್, ಬೀದರ್
10. ತೇಜಸ್ ಭಟ್ ಕೆ – ಶಾರದಾ ಇಂಡಿಪೆಂಡೆಂಟ್ ಪಿಯು ಕಾಲೇಜ್, ದಕ್ಷಿಣ ಕನ್ನಡ