LATEST NEWS
ಸಿಇಟಿ ಇಂಜಿನಿಯರಿಂಗ್ ನಲ್ಲಿ 2 ನೇ ಸ್ಥಾನ ಪಡೆದ ಮಂಗಳೂರಿನ ಶಾರದಾ ಕಾಲೇಜಿನ ವಿದ್ಯಾರ್ಥಿ

ಸಿಇಟಿ ಇಂಜಿನಿಯರಿಂಗ್ ನಲ್ಲಿ 2 ನೇ ಸ್ಥಾನ ಪಡೆದ ಮಂಗಳೂರಿನ ಶಾರದಾ ಕಾಲೇಜಿನ ವಿದ್ಯಾರ್ಥಿ
ಮಂಗಳೂರು ಜೂನ್ 01: ಸಿಇಟಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು ಮಂಗಳೂರಿನ ಶಾರದಾ ಕಾಲೇಜಿನ ವಿಧ್ಯಾರ್ಥಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಮಂಗಳೂರಿನ ಶಾರದಾ ಕಾಲೇಜಿಗೆ ಆಗಮಿಸಿದ ನಾರಾಯಣ್ ಪೈ ಅವರನ್ನು ಶಾಲೆಯ ಆಡಳಿತ ಮಂಡಳಿಯ ಸದಸ್ಯರು ಹಾಗು ಶಿಕ್ಷಕ ವರ್ಗ ಗೌರವಿಸಿ , ಸಿಹಿ ತಿನ್ನಿಸಿ ಅಭಿನಂದಿಸಿದರು. ಕೆನರಾ ಬ್ಯಾಂಕ್ ಚೀಫ್ ಮ್ಯಾನೇಜರ್ ಸುರೇಂದ್ರ ಪೈ ಹಾಗು ಸುಧಾ ದಂಪತಿಯ ಪುತ್ರ ನಾರಾಯಣ ಪೈ ಸಿಇಟಿ ಯ ಇಂಜಿನಿಯರಿಂಗ್ ನಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಬಂದಿರುವುದಕ್ಕೆ ಹರ್ಷ ವ್ಯಕ್ತಪಡಿಸಿದರು.

ರಾಜ್ಯ ಸಿಇಟಿ ಫಲಿತಾಂಶ ಪ್ರಕಟವಾಗಿದ್ದು, ಇಂಜಿನಿಯರಿಂಗ್ ವಿಭಾಗದಲ್ಲಿ ಮಂಗಳೂರಿನ ಶಾರದಾ ಕಾಲೇಜಿನ ವಿದ್ಯಾರ್ಥಿ ನಾರಾಯಣ್ ಪೈ ರಾಜ್ಯಕ್ಕೆ ದ್ವೀತಿಯ ಸ್ಥಾನ ಪಡೆದಿದ್ದಾರೆ. ಪಿಯುಸಿ ಯಲ್ಲಿ 96.67 ಅಂಕ ಹೊಂದಿರುವ ನಾರಾಯಣ ಪೈ ಮುಂಬರುವ ದಿನಗಳಲ್ಲಿ ಕಂಪ್ಯೂಟರ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಸಾಧನೆ ಮಾಡುವ ಇಚ್ಛೆ ಹೊಂದಿದ್ದಾರೆ.
ಈಗಾಗಲೇ ಜೆ ಇ ಇ ಮೇನ್ಸ್ ಪರೀಕ್ಷೆಯಲ್ಲಿ ಕಾಲೇಜಿಗೆ ಟಾಪರ್ ಆಗಿದ್ದೇನೆ ಈ ಜೆ ಇ ಇ ಪರೀಕ್ಷೆಯಲ್ಲಿ 3208 ರ್ಯಂಕ್ ಪಡೆದಿದ್ದು ಮಂಗಳೂರಿನ ಪ್ರತಿಷ್ಠಿತ ಎನ್ ಐ ಟಿ ಕೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರವೇಶ ಪಡೆದು ವ್ಯಾಸಾಂಗ ಮಾಡುವ ಇರಾದೆ ಹೊಂದಿದ್ದೇನೆ ಎಂದು ಅವರು ಹೇಳಿದರು.
ಸಿಇಟಿ ಅಥವಾ ಜೆಇಇ ಪರೀಕ್ಷೆ ಗಳಿಗಾಗಿ ಕೋಚಿಂಗ್ ತೆಗೆದುಕೊಂಡಿಲ್ಲ. ಕಾಲೇಜಿನಲ್ಲೇ ನೀಡಲಾಗುವ ಕೋಚಿಂಗ್ ಪಡೆದಿದ್ದೇನೆಯೇ ಹೊರತು ಹೊರಗಡೆ ಕೋಚಿಂಗ್ ಪಡೆದಿಲ್ಲ. ಆದರೆ ಅಂದಿನ ಪಾಠವನ್ನು ಅಂದೇ ಓದಿ ಮುಗಿಸುತ್ತಿದೆ. ಈ ಪರೀಕ್ಷೆಗಾಗಿಯೇ ಪರಿಶ್ರಮ ಪಟ್ಟಿದ್ದೇನೆ ಎಂದು ಅವರು ಸ್ಪಷ್ಟ ಪಡಿಸಿದರು.