Connect with us

LATEST NEWS

ಜನ ಸಂಚಾರಕ್ಕೆ ಯಾವುದೇ ನಿರ್ಬಂಧ ಹೇರಬೇಡಿ- ರಾಜ್ಯಗಳಿಗೆ ಕೇಂದ್ರ ಸರಕಾರ ಖಡಕ್ ಸೂಚನೆ

ನವದೆಹಲಿ : ಈಗಾಗಲೇ ಕೇಂದ್ರ ಸರಕಾರ ಅನ್ ಲಾಕ್ 3.0 ಮಾರ್ಗ ಸೂಚಿಗಳಲ್ಲಿ ಅಂತರಾರಾಜ್ಯ ಸಂಚಾರಕ್ಕೆ ಯಾವುದೇ ನಿರ್ಬಂಧ ಹೇರಬಾರದು ಎಂದು ತಿಳಿಸಿದ್ದರೂ ಕೆಲವು ರಾಜ್ಯಗಳಲ್ಲಿ ಇನ್ನೂ ನಿರ್ಭಂಧ ಇರುವುದನ್ನು ಮನಗಂಡಿರುವ ಕೇಂದ್ರ ಸರಕಾರ ಎಲ್ಲಾ ರಾಜ್ಯಗಳಿಗೆ ಎಚ್ಚರಿಕೆ ಸಂದೇಶ ಕಳುಹಿಸಿದೆ.


ಈ ಕೂಡಲೇ ಜನ ಸಂಚಾರ ಮತ್ತು ಸರಕು ಸಾಗಣೆಗೆ ಯಾವುದೇ ರೀತಿಯ ನಿರ್ಬಂಧಗಳನ್ನ ವಿಧಿಸಬೇಡಿ ಎಂದು ಎಲ್ಲಾ ರಾಜ್ಯ ಸರ್ಕಾರಗಳಿಗೂ ಕೇಂದ್ರ ಸೂಚನೆ ನೀಡಿದೆ. ಕೇಂದ್ರ ಸರ್ಕಾರದ ಮೂರನೇ ಹಂತದ ಅನ್​ಲಾಕ್ ಮಾರ್ಗಸೂಚಿಗಳನ್ನ ಉಲ್ಲೇಖಿಸಿಸುತ್ತಾ ಕೇಂದ್ರ ಗೃಹ ಇಲಾಖೆ ಕಾರ್ಯದರ್ಶಿ ಅಜಯ್ ಬಳ್ಳ, ಅಂತರರಾಜ್ಯ ಮತ್ತು ಸ್ಥಳೀಯ ಸಂಚಾರಕ್ಕೆ ನಿರ್ಬಂಧ ವಿಧಿಸದಿರಿ ಎಂದು ವಿವಿಧ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಮನವಿ ಮಾಡಿದ್ದಾರೆ.


ಅಂತಾರಾಜ್ಯ ಸರಕು ಸಾಗಣೆಗೆ ನಿರ್ಬಂಧ ಹೇರಿರುವುದರಿಂದ ಸರಬರಾಜು ಸರಪಳಿಗೆ (ಸಪ್ಲೈ ಚೈನ್) ಧಕ್ಕೆಯಾಗಿ ಆರ್ಥಿಕ ಚಟುವಟಿಕೆ ಮತ್ತು ಉದ್ಯೋಗ ಸೃಷ್ಟಿಗೆ ಹಿನ್ನಡೆ ತರುತ್ತಿದೆ. ಕೇಂದ್ರ ಸರ್ಕಾದ ಅನ್​ಲಾಕ್ ಮಾರ್ಗಸೂಚಿಯಲ್ಲಿ ಜನಸಂಚಾರ ಮತ್ತು ಸರಕು ಸಾಗಣೆಗೆ ಯಾವುದೇ ನಿರ್ಬಂಧ ಇರಬಾರದು ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಹಾಗೊಂದು ವೇಳೆ ನಿರ್ಬಂಧ ವಿಧಿಸಿದರೆ ಅದು ಮಾರ್ಗಸೂಚಿ ಉಲ್ಲಂಘನೆ ಆಗುತ್ತದೆ ಎಂದು ಕೇಂದ್ರ ಗೃಹ ಕಾರ್ಯದರ್ಶಿ ತಮ್ಮ ಪತ್ರದಲ್ಲಿ ಎಚ್ಚರಿಸಿದ್ದಾರೆ.


ಈ ಹಿನ್ನಲೆ ಕೊರೊನಾ ಲಾಕ್ ಡೌನ್ ನಿಂದ ದಕ್ಷಿಣಕನ್ನಡ ಹಾಗೂ ಕಾಸರಗೋಡು ಜಿಲ್ಲಾಡಳಿತದ ನಡುವೆ ನಡೆಯುತ್ತಿದ್ದ ಮುಸುಕಿನ ಗುದ್ದಾಟ ಕೊನೆಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಎರಡೂ ಜಿಲ್ಲೆಗಳೂ ಅಂತರ್ ರಾಜ್ಯ ಜನ ಸಂಚಾರಕ್ಕೆ ಪಾಸ್ ಗಳ ಮೂಲಕ ಅವಕಾಶ ನೀಡಿವೆ. ಅಲ್ಲದೆ ಕಾಸರಗೋಡು ಜಿಲ್ಲಾಡಳಿತ ಇನ್ನೂ ಜಿಲ್ಲೆಯ ಗಡಿಗಳಿಗೆ ಮಣ್ಣು ಹಾಕಿ ಬಂದ್ ಮಾಡಿದೆ.  ಈಗ ಕೇಂದ್ರ ಸರಕಾರ ಎಚ್ಚರಿಕೆ ನೀಡಿರುವ ಹಿನ್ನಲೆ ಕೇರಳ ಹಾಗೂ ಕರ್ನಾಟಕ ಸರಕಾರ ಕೂಡಲೇ ಎಲ್ಲಾ ಗಡಿಗಳನ್ನು ತೆರೆದು ಯಾವುದೇ ನಿಬಂಧನೆ ಇಲ್ಲದೆ ಜನ ಸಂಚಾರಕ್ಕೆ ಅವಕಾಶ ನೀಡಬೇಕಾಗಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *