LATEST NEWS
ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಕೊರೊನಾ ಪಾಸಿಟಿವ್

ನವದೆಹಲಿ ಸೆಪ್ಟೆಂಬರ್-16 : ಕೇಂದ್ರ ಭೂ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ಕೊರೋನಾ ಸೋಂಕು ದೃಢಪಟ್ಟಿದೆ.
ಈ ಕುರಿತು ಟ್ವೀಟ್ ಮಾಡಿರುವ ಸಚಿವರು, ನಿಶ್ಯಕ್ತಿ ಕಂಡು ಬಂದ ಹಿನ್ನಲೆ ನನ್ನ ವೈದ್ಯರನ್ನು ಭೇಟಿಯಾದೆ. ಈ ವೇಳೆ ಕೊರೋನಾ ಸೋಂಕಿರುವುದು ದೃಢಪಟ್ಟಿದೆ. ಸದ್ಯ ನಿಮ್ಮೆಲ್ಲಾರ ಹಾರೈಕೆಯಿಂದ ನನ್ನ ಆರೋಗ್ಯ ಸ್ಥಿರವಾಗಿದೆ. ಸೋಂಕು ದೃಢಪಟ್ಟ ಹಿನ್ನಲ್ಲೇ ಯಾರ ಸಂಪರ್ಕಕ್ಕೂ ಒಳಗಾಗದಂತೆ ಮನೆಯಲ್ಲಿಯೇ ಪ್ರತ್ಯೇಕವಾಗಿದ್ದೇನೆ ಎಂದು ತಿಳಿಸಿದ್ದಾರೆ. ಅಲ್ಲದೆ ಇತ್ತೀಚಿಗೆ ನನ್ನ ಸಂಪರ್ಕಕ್ಕೆ ಒಳಗಾದ ಎಲ್ಲರೂ ಸುರಕ್ಷಾ ಕ್ರಮವಹಿಸಿ ಹಾಗೂ ಪರೀಕ್ಷೆಗೆ ಒಳಪಡುವಂತೆ ಮನವಿ ಮಾಡಿದ್ದಾರೆ.
