LATEST NEWS
ಮಂಗಳೂರು ಸೆಂಟ್ರಲ್ ಮಾರ್ಕೆಟ್ – ಕಾರ್ಮಿಕರ ಶೆಡ್ ಕುಸಿದು ಬಿದ್ದು10 ಮಂದಿ ಕಾರ್ಮಿಕರಿಗೆ ಗಾಯ
![](https://i0.wp.com/themangaloremirror.in/wp-content/uploads/2024/04/For-Advertisement-Please-Contact.jpg?fit=728%2C90&ssl=1)
ಮಂಗಳೂರು ಮಾರ್ಚ್ 14: ಮಂಗಳೂರು ಸೆಂಟ್ರಲ್ ಮಾರ್ಕೆಟ್ ನ ಕಾಮಗಾರಿ ಸ್ಥಳದಲ್ಲಿ ಕಾರ್ಮಿಕರ ಶೆಡ್ ಕುಸಿದು ಬಿದ್ದ ಕಾರಣ 10 ಮಂದಿ ಗಾಯಗೊಂಡ ಘಟನೆ ನಿನ್ನೆ ತಡರಾತ್ರಿ ನಡೆದಿದೆ.
ನಿನ್ನೆ ತಡ ರಾತ್ರಿ 11.30 ರ ಸುಮಾರಿಗೆ ಈ ದುರ್ಘಟನೆ ಸಂಭವಿಸಿದ್ದು ಈ ಸಂದರ್ಭ ಕೂಲಿ ಕಾರ್ಮಿಕರು ಶೆಡ್ ನಲ್ಲಿ ಮಲಗಿದ್ದರು ಎನ್ನಲಾಗಿದೆ. ಏಕಾಏಕಿ ಶೆಡ್ ನ ತಳ ಭಾಗ ಕುಸಿದು ಬಿದ್ದ ಕಾರಣ ಈ ಅನಾಹುತ ಸಂಭವಿಸಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿ ಬಳಿಕ ಬಿಡುಗಡೆ ಮಾಡಲಾಗಿದೆ. ದುರ್ಘಟನೆಗೆ ಕಟ್ಟಡ ಕಾಮಾಗಾರಿ ಮಾಡುತ್ತಿರುವವರ ಬೇಜಾಬ್ದಾರಿ ಎಂದು ಸ್ಥಳೀಯರು ಆರೋಪಿಸಿದ್ದಾರೆ.
![](https://i0.wp.com/themangaloremirror.in/wp-content/uploads/2024/06/IMG-20240626-WA0023.jpg?fit=1280%2C670&ssl=1)
ಹೊಸ ಸೆಂಟ್ರಲ್ ಮಾರ್ಕೆಟ್ ಕಟ್ಟಡ ನಿರ್ಮಾಣಕ್ಕಾಗಿ ಕಾರ್ಮಿಕರು ಮಲಗಿದ್ದ ಶೆಡ್ ಗಳ ಅಡಿ ಭಾಗದಲ್ಲಿ ಸುಮಾರು 30 ಅಡಿಗಳಷ್ಟು ಆಳ ಮಣ್ಣನ್ನು ತೆಗೆಯಲಾಗಿದ್ದು ಈ ಸಂದರ್ಭ ಮೇಲ್ಭಾಗದಲ್ಲಿದ್ದ ಶೆಡ್ ಗಳ ಅಡಿ ಭಾಗ ಏಕಾಏಕಿ ಕುಸಿದು ಬಿದ್ದಿದೆ.
You must be logged in to post a comment Login