LATEST NEWS
ತನಿಖಾ ಸಂಸ್ಥೆಗಳು ಕೇಂದ್ರದ ಕೈವಶ- ಕೆ.ಸಿ.ವೇಣುಗೋಪಾಲ್ ಆರೋಪ

ತನಿಖಾ ಸಂಸ್ಥೆಗಳು ಕೇಂದ್ರದ ಕೈವಶ- ಕೆ.ಸಿ.ವೇಣುಗೋಪಾಲ್ ಆರೋಪ
ಉಡುಪಿ,ನವಂಬರ್ 6: ಕೇಂದ್ರ ಸರಕಾರ ಆಡಳಿತ ವ್ಯವಸ್ಥೆಯನ್ನು ಸಂಪೂರ್ಣ ದುರುಪಯೋಗಪಡಿಸುತ್ತಿದೆ ಎಂದು ರಾಜ್ಯ ಕಾಂಗ್ರೇಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಆರೋಪಿಸಿದರು. ಉಡುಪಿಯಲ್ಲಿ ಮಾತನಾಡಿದ ಅವರು ಸಚಿವ ಎಂ.ಬಿ.ಪಾಟೀಲ್ ಫೋನ್ ಕದ್ದಾಲಿಕೆ ಮಾಡುವ ಮೂಲಕ ಆಡಳಿತ ಯಂತ್ರವನ್ನು ದುರುಪಯೋಗ ಮಾಡಿರುವುದಕ್ಕೆ ಸೂಕ್ತ ಉದಾಹರಣೆಯಾಗಿದೆ. ಇದೊಂದು ಗಂಭೀರ ಆರೋಪವಾಗಿದ್ದು, ಕೇಂದ್ರ ಸರಕಾರ ಅಧೀನದಲ್ಲಿರುವ ಯಾವುದೇ ಸಂಸ್ಥೆಯು ಸ್ವತಂತ್ರವಾಗಿ ಉಳಿದುಕೊಂಡಿಲ್ಲ ಎಂದು ಆರೋಪಿಸಿದರು. ಸಚಿವ ಡಿ.ಕೆ. ಶಿವಕುಮಾರ್ ಮೇಲಿನ ಐ.ಟಿ. ದಾಳಿಯೂ ಇದರ ಒಂದು ಭಾಗವಾಗಿದೆ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು.