LATEST NEWS
ಆನ್ಲೈನ್ ಜಾಹೀರಾತುಗಳ ಮೇಲೆ ಡಿಜಿಟಲ್ ತೆರಿಗೆ ರದ್ದು ಮಾಡಿದ ಕೇಂದ್ರ ಸರ್ಕಾರ

ನವದೆಹಲಿ, ಮಾರ್ಚ್ 25: ‘ಗೂಗಲ್, ಎಕ್ಸ್ ಮತ್ತು ಮೆಟಾಗಳಲ್ಲಿ ಪ್ರಕಟವಾಗುವ ಆನ್‌ಲೈನ್ ಜಾಹೀರಾತುಗಳ ಮೇಲೆ ವಿಧಿಸಲಾಗುವ ಶೇ 6ರಷ್ಟು ಸಮಾನೀಕರಣ ತೆರಿಗೆ ಅಥವಾ ಡಿಜಿಟಲ್ ತೆರಿಗೆಯನ್ನು ಇದೇ ಏಪ್ರಿಲ್ 1ರಿಂದ ರದ್ದು ಮಾಡಲಾಗುವುದು’ ಎಂದು ಕೇಂದ್ರ ಸರ್ಕಾರ ಹೇಳಿದೆ.
ಹಣಕಾಸು ಕಾಯ್ದೆಗೆ ತಂದಿರುವ ತಿದ್ದುಪಡಿ ಮಸೂದೆಯನ್ನು ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ c ಅವರು ಲೋಕಸಭೆಯಲ್ಲಿ ಸೋಮವಾರ ಮಂಡಿಸಿದರು. 2016ರ ಹಣಕಾಸು ಕಾಯ್ದೆಗೆ ತಿದ್ದುಪಡಿ ತಂದು ಡಿಜಿಟಲ್ ತೆರಿಗೆಯನ್ನು ಜಾರಿ ಮಾಡಲಾಗಿತ್ತು ಇದೇ ಹಣಕಾಸು ಕಾಯ್ದೆಗೆ 2020ರಲ್ಲಿ ತಂದ ತಿದ್ದುಪಡಿಯಲ್ಲಿ ಇ-ಕಾಮರ್ಸ್ ಮಾರಾಟ ಮತ್ತು ಸೇವೆಗಳ ಮೇಲೆಯೂ ಶೇ 2ರಷ್ಟು ಡಿಜಿಟಲ್ ತೆರಿಗೆಯನ್ನು ಹೇರಲಾಗಿತ್ತು.

ಈಗ ಹಣಕಾಸು ಕಾಯ್ದೆಗೆ 59ನೇ ತಿದ್ದುಪಡಿ ತರುವ ಮೂಲಕ ಕೇಂದ್ರ ಸರ್ಕಾರವು ಈ ಎಲ್ಲ ತೆರಿಗೆಗಳನ್ನು ರದ್ದು ಮಾಡಲು ಮುಂದಾಗಿದೆ ‘ಅಮೆರಿಕಕ್ಕೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ’ ಎಂದು ತಜ್ಞರು ವಿಶ್ಲೇಷಿಸುತ್ತಿದ್ದಾರೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪ್ರತಿ ಸುಂಕ ಹೇರುವ ಬೆದರಿಕೆ ಒಡ್ಡಿದ್ದಾರೆ