BELTHANGADI
ಕೇಂದ್ರದ ಅನುದಾನವನ್ನು ಭ್ರಷ್ಟಾಚಾರದಲ್ಲಿ ತೊಡಗಿಸಿದ ರಾಜ್ಯ ಸರಕಾರ – ರಾಜನಾಥ್ ಸಿಂಗ್ ಆರೋಪ
ಕೇಂದ್ರದ ಅನುದಾನವನ್ನು ಭ್ರಷ್ಟಾಚಾರದಲ್ಲಿ ತೊಡಗಿಸಿದ ರಾಜ್ಯ ಸರಕಾರ – ರಾಜನಾಥ್ ಸಿಂಗ್ ಆರೋಪ
ಬೆಳ್ತಂಗಡಿ ಎಪ್ರಿಲ್ 23: ಕೇಂದ್ರ ಸರಕಾರ 13 ನೇ ಹಣಕಾಸು ಆದಾಯದಲ್ಲಿ 20 ಸಾವಿರ ಕೋಟಿ, ಮೋದಿ ಸರಕಾರ ಬಂದ ಬಳಿಕ 14 ನೇ ಆಯೋಗದಿಂದ 2 ಲಕ್ಷ ಕೋಟಿ ಹಣ ಬಿಡುಗಡೆ ಮಾಡಿದೆ, ಆದರೆ ರಾಜ್ಯದಲ್ಲಿ ಅಭಿವೃದ್ದಿಯಾಗಿಲ್ಲ. ರಾಜ್ಯ ಸರಕಾರ ಒಂದೋ ಈ ಹಣವನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ವಿನಿಯೋಗಿಸಿಲ್ಲ, ಇಲ್ಲವೇ ಆ ಹಣವನ್ನು ಭ್ರಷ್ಟಾಚಾರ ದಲ್ಲಿ ತೊಡಗಿಸಿದೆ ಎಂದು ಆರೋಪಿಸಿದರು.
ಅಭಿವೃದ್ಧಿ ಮತ್ತು ಉತ್ತಮ ಆಡಳಿತ ಕೇಂದ್ರ ಸರಕಾರದ ಬದ್ಧತೆಯಾದರೆ, ರಾಜ್ಯ ಸರಕಾರ ಅಭಿವೃದ್ಧಿಯನ್ನು ಬಿಟ್ಟು ಟಿಪ್ಪು ಜಯಂತಿ ವಿಚಾರದಲ್ಲೇ ತಲ್ಲೀನವಾಗಿದೆ, ಹನುಮಾನ್ ಜಯಂತಿಯ ಆಚರಣೆಗೆ ನಿಶೇಧ ಹೇರುವ ಮೂಲಕ ಜಾತಿ,ಧರ್ಮದ ಮೂಲಕ ಒಡೆದು ಆಡುವ ನೀತಿ ರಾಜ್ಯ ಸರಕಾರದ್ದಾಗಿದೆ ಎಂದು ಆರೋಪಿಸಿದರು.
ರಾಜ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಚುನಾವಣೆ ಹತ್ತಿರ ಬರುತ್ತಿದ್ದಂತೆ ಧರ್ಮ ಹಾಗೂ ಧ್ವಜದ ವಿಷಯನ್ನು ಮಾತನಾಡುತ್ತಿದೆ. ನಾಲ್ಕು ವರ್ಷದ ಹಿಂದೆ ಈ ವಿಷಯವನ್ನು ಯಾಕೆ ಮಾಡಿಲ್ಲ ಎಂದು ಪ್ರಶ್ನಿಸಿದರು.
ಸರ್ಟಿಫಿಕೇಟ್ ಗಳಿಗೆ ಇನ್ನು ಮುಂದೆ ನೋಟರಿಗಳ ಹತ್ತಿರ ಹೋಗುವ ಅಗತ್ಯವಿಲ್ಲ, ಮುಂದಿನ ದಿನ ಈ ವ್ಯವಸ್ಥೆಗೆ ಕೇಂದ್ರ ಸರಕಾರ ಸಂಪೂರ್ಣ ತಿಲಾಂಜಲಿ ನೀಡಲಿದೆ ಎಂದು ತಿಳಿಸಿದರು.