LATEST NEWS
ಭಾರತೀಯ ವಾಯುಸೇನೆಯ ಎರ್ ಸ್ಟ್ರೈಕ್ ಮಂಗಳೂರಿನಲ್ಲಿ ವಿಜಯೋತ್ಸವ

ಭಾರತೀಯ ವಾಯುಸೇನೆಯ ಎರ್ ಸ್ಟ್ರೈಕ್ ಮಂಗಳೂರಿನಲ್ಲಿ ವಿಜಯೋತ್ಸವ
ಮಂಗಳೂರು ಫೆಬ್ರವರಿ 26: ಕಾಶ್ಮೀರದ ಪುಲ್ವಾಮ ಉಗ್ರರ ದಾಳಿಗೆ ಭಾರತೀಯ ವಾಯುಸೇನೆಯ ಪ್ರತೀಕಾರದ ದಾಳಿಗೆ ಎಲ್ಲಡೆ ಹರ್ಷ ವ್ಯಕ್ತವಾಗಿದ್ದು, ದೇಶದಾದ್ಯಂತ ವಿಜಯೋತ್ಸವ ಆಚರಿಸಲಾಗುತ್ತಿದೆ.
ಮಂಗಳೂರಿನಲ್ಲೂ ಭಾರತೀಯ ವಾಯುಸೇನೆಯ ಪರಾಕ್ರಮಕ್ಕೆ ಎಲ್ಲೆಡೆ ಹರ್ಷ ವ್ಯಕ್ತವಾಗಿದ್ದು, ಪಟಾಕಿ ಸಿಡಿಸಿ ಸಂಭ್ರಮಿಸಲಾಗುತ್ತಿದೆ.
ಮಂಗಳೂರಿನ ರಥಬೀದಿಯಲ್ಲಿರುವ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ವಾಯುದಾಳಿಯ ಬಳಿಕ ಯಾವುದೇ ಪರಿಸ್ಥಿತಿ ಎದುರಿಸಲು ಪ್ರಧಾನಿ ನರೇಂದ್ರ ಮೋದಿಯವರಿಗೆ ಹಾಗೂ ಕೇಂದ್ರ ಸರ್ಕಾರ ಮತ್ತು ಸೇನೆಗೆ ಶಕ್ತಿ ಸಾಮರ್ಥ್ಯ ಮನೋಬಲ ಹೆಚ್ಚಿಸಲು ದೇವರಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

ಎಲ್ ಓಸಿ ದಾಟಿ ಪಾಕಿಸ್ಥಾನದ ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಿದ ಸಂಪೂರ್ಣ ನಾಶ ಮಾಡಿದ ಹಿನ್ನಲೆಯಲ್ಲಿ ಮಂಗಳೂರು ನಗರದಾದ್ಯಂತ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಲಾಗುತ್ತಿದೆ. ಮಸೀದಿ ಚರ್ಚ್ ನಲ್ಲೂ ವಿಶೇಷ ಪ್ರಾರ್ಥನೆ ಸಲ್ಲಿಸಲು ಮನವಿ ಕೂಡ ಮಾಡಲಾಗಿದೆ.