LATEST NEWS
ತಲೆ ಮೇಲೆ ಬಿದ್ದ ಫ್ಯಾನ್: ಅಪಾಯದಿಂದ ಪಾರಾದ ಅಂಗಡಿ ಮಾಲೀಕ

ಉಡುಪಿ ನವೆಂಬರ್ 23 : ಸಂಜೆ ಸಂದರ್ಭ ತರಕಾರಿ ಅಂಗಡಿಯಲ್ಲಿ ಲೆಕ್ಕ ಬರೆಯುತ್ತಿದ್ದ ವೇಳೆ ಏಕಾಏಕಿ ಸೀಲಿಂಗ್ ಪ್ಯಾನ್ ಬಿದ್ದು, ತರಕಾರಿ ಅಂಗಡಿ ಮಾಲೀಕ ಕೂದಲೆಳೆಯ ಅಂತರದಲ್ಲಿ ಅಪಾಯದಿಂದ ಪಾರಾದ ಘಟನೆ ಉಡುಪಿಯಲ್ಲಿ ನಡೆದಿದೆ.
ಆದಿ ಉಡುಪಿಯಲ್ಲಿರುವ ತರಕಾರಿ ಅಂಗಡಿ ಮಾಲೀಕ ಸತೀಶ್ ಅಪಾಯದಿಂದ ಪಾರಾದ ವ್ಯಕ್ತಿ. ಸತೀಶ್ ಸಂಜೆ ಸಂದರ್ಭ ತರಕಾರಿ ಮಾರಾಟದ ಲೆಕ್ಕಾಚಾರ ಬರೆಯುತ್ತಿದ್ದರು. ಈ ವೇಳೆ ಮೇಲೆ ತಿರುಗುತ್ತಿದ್ದ ಫ್ಯಾನ್ ಇದ್ದಕ್ಕಿದ್ದ ಹಾಗೆ ಕೆಳಗೆ ಬಿದ್ದಿದೆ.

ಆದರೆ ಪ್ಯಾನ್ ಬೀಳುವುದಕ್ಕೂ ಮುಂಚೆ ಶಬ್ದ ಕೇಳಿ ಸತೀಶ್ ಸ್ಥಳದಿಂದ ಎದ್ದಿದ್ದಾರೆ. ಈ ಅವಘಡ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು. ತಿರುಗುತ್ತಿದ್ದ ಫ್ಯಾನ್ ಬೀಳುತ್ತಿದ್ದಂತೆ ತಪ್ಪಿಸಿಕೊಂಡು ಪ್ರಾಣ ಉಳಿಸಿಕೊಂಡಿದ್ದಾರೆ.
https://youtu.be/54bmEXeM1DQ