LATEST NEWS
ಸಿಸಿಟಿವಿಯಲ್ಲಿ ರೆಕಾರ್ಡ್ ಆದ ಮುಲ್ಕಿ ಮರ್ಡರ್ ದೃಶ್ಯ….!!

ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳ ಬಂಧನ
ಮಂಗಳೂರು ಜೂನ್ 6: ನಿನ್ನೆ ಮಂಗಳೂರಿನ ಮುಲ್ಕಿಯಲ್ಲಿ ನಡೆದ ಉದ್ಯಮಿಯ ಬರ್ಬರ ಹತ್ಯೆಯ ಸಿಸಿಟಿವಿ ವಿಡಿಯೋ ಲಭ್ಯವಾಗಿದ್ದು, ಹಾಡುಹಗಲೇ ಜನರ ಮಧ್ಯೆ ನಡೆದ ಈ ಭಿಭತ್ಸ ಘಟನೆ ಸಂಪೂರ್ಣ ವಿಡಿಯೋ ದಾಖಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿಯಲ್ಲಿ ನಿನ್ನೆ ಹಾಡು ಹಗಲಲ್ಲೇ ಉದ್ಯಮಿ ಅಬ್ದುಲ್ ಲತೀಫ್(38)ಎಂಬವರ ಹತ್ಯೆ ನಡೆಸಲಾಗಿತ್ತು. ಕಾರ್ ಮತ್ತು ಬೈಕ್ ನಲ್ಲಿ ಬಂದ ಒಂಬತ್ತು ಮಂದಿ ದುಷ್ಕರ್ಮಿಗಳು ತಂಡ ಅಬ್ದುಲ್ ಲತೀಫ್ ಅವರನ್ನು ಅಮಾನುಷವಾಗಿ ಚೂರಿಯಿಂದ ಇರಿಯುತ್ತಿರುವ ದೃಶ್ಯ ಸೆರೆಯಾಗಿದೆ.
ನಡು ರಸ್ತೆಯಲ್ಲೇ ಅಬ್ದುಲ್ ಲತೀಫ್ ಅವರ ಮೇಲೆ ದುಷ್ಕರ್ಮಿಗಳು ಆಕ್ರಮಣ ಮಾಡಿದ್ದರು. ಅವರಿಂದ ತಪ್ಪಿಸಿಕೊಂಡ ಅಬ್ದುಲ್ ಲತೀಫ್ ಪ್ರಾಣ ರಕ್ಷಣೆಗೆ ಬ್ಯಾಂಕ್ ಒಳಗೆ ಬರಲು ಪ್ರಯತ್ನಿಸಿದ್ದರು ಆದರೆ ಅಷ್ಟರೊಳಗೆ ಬ್ಯಾಂಕ್ ಸಿಬ್ಬಂದಿ ಬ್ಯಾಂಕ್ ನ ಬಾಗಿಲು ಮುಚ್ಚಿದ್ದಾರೆ. ಈ ಹಿನ್ನಲೆ ದುಷ್ಕರ್ಮಿಗಳು ಬ್ಯಾಂಕ್ ಮುಂಭಾಗದಲ್ಲೆ ಲತೀಫ್ ಗೆ ಚೂರಿಯಿಂದ ಇರಿದು ಕೊಲೆ ಮಾಡಿದ್ದಾರೆ.

ಮೂಡಬಿದ್ರೆಯಲ್ಲಿ ಉದ್ಯಮಿಯಾಗಿರುವ ಅಬ್ದುಲ್ ಲತೀಫ್ ವೈಯಕ್ತಿಕ ದ್ವೇಷದಿಂದ ಹತ್ಯೆ ನಡೆಸಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದು, ಸದ್ಯ ನಾಲ್ಕು ಜನ ಆರೋಪಿಗಳನ್ನು ಬಂಧಿಸಿರುವ ಮುಲ್ಕಿ ಪೋಲಿಸರು ಯಶಸ್ವಿಯಾಗಿದ್ದಾರೆ. ಬಂಧಿತರನ್ನು ಮುಲ್ಕಿ ನಿವಾಸಿ ಮೊಹಮ್ಮದ್ ಹಾಸಿಮ್, ನಿಸಾರ್, ಮೊಹಮ್ಮದ್ ರಾಝಿಂ, ಉಡುಪಿಯ ಉಚ್ಚಿಲ ನಿವಾಸಿ ಅಬೂಬಕ್ಕರ್ ಸಿದ್ದಿಕ್ ಎಂದು ಗುರುತಿಸಲಾಗಿದೆ. ಪೊಲೀಸರು ಆರೋಪಿಗಳು ಈ ಕೃತ್ಯಕ್ಕೆ ಬಳಸಿದ ಆಯುಧ, ವಾಹನ ವಶಕ್ಕೆ ಪಡೆದಿದ್ದಾರೆ.