Connect with us

    LATEST NEWS

    ಹೆಸರಾಂತ ಫುಟ್ಬಾಲ್ ಆಟಗಾರ ಹಂಝ ಕೋಯ ಕೊರೊನಾಗೆ ಬಲಿ

    ಹೆಸರಾಂತ ಫುಟ್ಬಾಲ್ ಆಟಗಾರ ಹಂಝ ಕೋಯ ಕೊರೊನಾಗೆ ಬಲಿ

    ಮಲಪ್ಪುರಂ, ಜೂನ್ 6, ಕೇರಳದ ಹೆಸರಾಂತ ಫುಟ್ಬಾಲ್ ಆಟಗಾರರಾಗಿದ್ದ ಇ. ಹಂಝ ಕೋಯಾ (61) ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ.


    ಪತ್ನಿ ಮಕ್ಕಳೊಂದಿಗೆ ಮುಂಬೈನಲ್ಲಿ ನೆಲೆಸಿದ್ದ ಹಂಝ ಕೋಯಾ ಮೇ 21ರಂದು ತನ್ನ ಹುಟ್ಟೂರು ಪರಪ್ಪನಂಗಡಿಗೆ ಮರಳಿದ್ದರು. ಮುಂಬೈನಿಂದ ಬಂದು ಕ್ವಾರಂಟೈನ್ ನಲ್ಲಿದ್ದ ಇವರ ಪೈಕಿ ಕೋಯಾ ಪತ್ನಿ ಮತ್ತು ಮಗನಿಗೆ ಮೊದಲು ಕೊರೊನಾ ಪಾಸಿಟಿವ್ ಕಂಡುಬಂದಿತ್ತು‌. ಆನಂತ್ರ ಹಂಝರಿಗೂ ಪಾಸಿಟಿವ್ ಆಗಿ ಆಸ್ಪತ್ರೆಯಲ್ಲಿ ನಿಗಾದಲ್ಲಿದ್ದರು. ಇಂದು ಬೆಳಗ್ಗೆ ಹಂಝ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು ಕೇರಳದಲ್ಲಿ ಕೊರೊನಾಗೆ ಬಲಿಯಾದವರ ಸಂಖ್ಯೆ 15ಕ್ಕೇರಿದೆ.


    ಕೇರಳದಲ್ಲಿ ಫುಟ್ಬಾಲ್ ಆಟಗಾರನಾಗಿ ಹೆಸರು ಪಡೆದಿದ್ದ ಹಂಝ ಆಬಳಿಕ ಮಹಾರಾಷ್ಟ್ರ ರಾಜ್ಯದ ಪರ ಸಂತೋಷ್ ಟ್ರೋಫಿ ಟೂರ್ನಿಯಲ್ಲಿ ಆಟವಾಡುತ್ತಿದ್ದರು. ಮೋಹನ್ ಬೆಗಾನ್, ಮಹಮ್ಮಡನ್ ಸ್ಪೋರ್ಟ್ಸ್ ಕ್ಲಬ್ ಪರವಾಗಿಯೂ ಫುಟ್ಬಾಲ್ ಆಡಿದ್ದರು. ನೆಹರೂ ಟ್ರೋಫಿ ಫುಟ್ಬಾಲ್ ನಲ್ಲಿ ರಾಷ್ಟ್ರೀಯ ತಂಡದ ಪರವಾಗಿಯೂ ಕೋಯಾ ಆಟವಾಡಿ ಗಮನ ಸೆಳೆದಿದ್ದರು.

    Share Information
    Advertisement
    Click to comment

    You must be logged in to post a comment Login

    Leave a Reply