KARNATAKA
ಕಾಸ್ಲಿ ‘ಫಾರ್ಚುನರ್’ ಕಾರಿನಲ್ಲಿ ದನಗಳ್ಳತನಕ್ಕಿಳಿದ ಗೋ ಕಳ್ಳರು, ಕೃತ್ಯ ಸಿ ಸಿ ಟಿವಿಯಲ್ಲಿ ಸೆರೆ…!!
ಶಿವಮೊಗ್ಗ : ತಿರುಪತಿಗೆ ಕರ್ನಾಟಕದಿಂದ ತುಪ್ಪ ಸರಬರಾಜು ಆರಂಭವಾದ ಬಳಿಕ ರಾಜ್ಯದಲ್ಲಿ ಹೈನುಗಾರಿಕೆಗೆ ಬಲ ಬಂದಿದ್ದು ರೈತರು ಖುಷಿಯಲ್ಲಿದ್ದರೆ ಮತ್ತೊಂದೆಡೆ ತಮ್ಮ ಹಸುಗಳ ರಕ್ಷಣೆಯೇ ಸವಾಲಾಗಿದೆ. ಹಸುಗಳನ್ನು ಕದ್ದು ವಧೆ ಮಾಡಿ ಮಾಂಸ ಮಾರಾಟ ಮಾಡಿ ಲಕ್ಷ ಲಕ್ಷ ರೂಪಾಯಿ ಕಮಾಯಿ ಮಾಡುವ ದಂಧೆ ಹೆಚ್ಚಾಗ್ತಿದೆ.
ಹಸುಗಳನ್ನು ಕದಿಯಲು ಲಕ್ಷಾಂತರ ಮೌಲ್ಯದ ಕಾರುಗಳ ಬಳಕೆ ಕೂಡ ನಡೆಯುತ್ತಿದೆ. ಕಳೆದ ಕೆಲದಿನಗಳ ಹಿಂದೆ ಐಷಾರಾಮಿ ಫಾರ್ಚುನರ್ (fortuner )ಕಾರಿನ ಹಿಂಬದಿಯ ಸೀಟನ್ನು ತೆಗೆದು ಹಸು ಸಾಗಾಟ ಮಾಡುವ ಗೋಕಳ್ಳರ ಕರಾಮತ್ತು ಶಿವಮೊಗ್ಗದಲ್ಲಿ ಬೆಳಕಿಗೆ ಬಂದಿದೆ. ಜಾನುವಾರು ಕಳ್ಳತನ ಮಾಡುವ ಖದೀಮರ ಕರಾಮತ್ತು ಸಿ ಸಿ ಟಿವಿಯಲ್ಲಿದಾಖಲಾಗಿದೆ. ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನಲ್ಲಿ ಈ ಘಟನೆ ನಡೆದಿದ್ದು ಫಾರ್ಚೂನರ್ ಕಾರಿನಲ್ಲಿ ಬಂದು ಹಸು ಕಳವು ಮಾಡುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.ಮಂಕಿ ಕ್ಯಾಪ್ ಹಾಕಿಕೊಂಡು ಐದಾರು ಮಂದಿ ಬಂದಿದ್ದು ವಿಷಯ ತಿಳಿದು ಸ್ಥಳೀಯರು ಕಾರು ಅಡ್ಡ ಹಾಕಲು ಯತ್ನಿಸಿದ ಸಂದರ್ಭದಲ್ಲಿ ಹಸು ಕಳ್ಳರಿಂದ ಸ್ಥಳೀಯರ ಮೇಲೆ ಕಾರು ಹತ್ತಿಸುವ ಪ್ರಯತ್ನ ಕೂಡ ನಡೆದಿದೆ. ಸೊರಬದಲ್ಲಿ ಹಸು ಕಳವು ಪ್ರಕರಣಗಳು ಹೆಚ್ಚಾಗುತ್ತಿದ್ದು ಘಟನೆ ಕುರಿತು ಸೊರಬ ಠಾಣೆ ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದ್ದು ಹಸು ಕಳ್ಳರ ವಿರುದ್ದ ಕ್ರಮಕ್ಕೆ ಸ್ಥಳೀಯರ ಆಗ್ರಹಿಸಿದ್ದಾರೆ.