LATEST NEWS
ಸಿಸಿಬಿ ಪೊಲೀಸರಿಂದ 13 ಕೆಜಿ ಗಾಂಜಾ ಸಹಿತ ಇಬ್ಬರ ಬಂಧನ

ಮಂಗಳೂರು ಮಾರ್ಚ್ 13: ಮಾದಕ ವಸ್ತು ಗಾಂಜಾ ಸಾಗಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು ಬಂಧಿತರಿಂದ ಪೊಲೀಸರು 13 ಕೆಜಿ ಗಾಂಜಾ ವಶಕ್ಕೆ ಪಡೆದಿದ್ದಾರೆ.
ಬಂಧಿತರನ್ನು ಪಾಣೆಮಂಗಳೂರಿನ ಅಬ್ದುಲ್ ಸಾದಿಕ್(35) ಮತ್ತು ಬೆಳ್ತಂಗಡಿಯ ಕಕ್ಕಿಂಜೆಯ ನವಾಜ್ (24). ಆರೋಪಿಗಳು ಮಾರ್ಚ್ 11 ರಂದು ಸಂಜೆ ಕಂಕನಾಡಿ ರೈಲ್ವೆ ನಿಲ್ದಾಣದ ಬಳಿ ಗಾಂಜಾ ಸಾಗಾಟ ಯತ್ನಿಸುತ್ತಿದ್ದರು. ವಶ ಪಡಿಸಿಕೊಂಡ ಗಾಂಜಾ ಮೌಲ್ಯ 3,90,000 ಎಂದು ಪೊಲೀಸರು ಅಂದಾಜಿಸಿದ್ದು, ಮೊಬೈಲ್ ಗಳನ್ನೂ ವಶಕ್ಕೆ ಪಡೆಯಲಾಗಿದೆ.ಅಬ್ದುಲ್ ಸಾದಿಕ್ ವಿರುದ್ಧ ಮೈಸೂರಿನ ಲಷ್ಕರ್ ಮೊಹಲ್ಲಾ ಪೊಲೀಸ್ ಠಾಣೆಯಲ್ಲೂ ಈ ಹಿಂದೆ ಪ್ರಕರಣ ದಾಖಲಾಗಿತ್ತು. ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
