LATEST NEWS
ದನ ವ್ಯಾಪಾರಿ ಹಸನಬ್ಬ ಸಾವು ಕೊಲೆ- ಮರಣೋತ್ತರ ಪರಿಕ್ಷಾ ವರದಿ ಬಿಡುಗಡೆ

ದನ ವ್ಯಾಪಾರಿ ಹಸನಬ್ಬ ಸಾವು ಕೊಲೆ- ಮರಣೋತ್ತರ ಪರಿಕ್ಷಾ ವರದಿ ಬಿಡುಗಡೆ
ಉಡುಪಿ, ಜೂನ್ 15: ಉಡುಪಿಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿದ್ದ ದನದ ವ್ಯಾಪಾರಿ ಹಸನಬ್ಬ ಅವರ ಸಾವು ಕೊಲೆ ಎಂದು ಸಾಬೀತಾಗಿದೆ.
ಹಸನಬ್ಬ ತಲೆಯಲ್ಲಿದ್ದ ಗಾಯವೇ ಅವರ ಸಾವಿಗೆ ಕಾರಣವೆಂದು ಶವದ ಮರಣೋತ್ತರ ಪರೀಕ್ಷೆ ನಡೆಸಿದ ಮಣಿಪಾಲ ವೈದ್ಯರು ಸ್ಪಷ್ಟಪಡಿಸಿದ್ದಾರೆ.

ಮೇ 29 ರಂದು ಉಡುಪಿಯ ಪೆರ್ಡೂರು ಸಮೀಪದ ಕಾಫಿ ತೋಟದಲ್ಲಿ ಅಕ್ರಮ ದನ ಕಳ್ಳ ಸಾಗಾಟದಲ್ಲಿ ತೊಡಗಿದ್ದ ಹಸನಬ್ಬ ಅವರ ಶವ ಅನುಮಾನಾಸ್ಪದವಾಗಿ ಪತ್ತೆಯಾಗಿತ್ತು.
ಈ ಹಿನ್ನಲೆಯಲ್ಲಿ ಈ ಸಾವು ಕೊಲೆ ಎಂದು ಹಸನಬ್ಬ ಕುಟುಂಬ ಸಂಶಯ ವ್ಯಕ್ತಪಡಿಸಿದ ಕಾರಣ ಪ್ರಕರಣವನ್ನು ಹಿರಿಯ ಪೋಲೀಸ್ ಅಧಿಕಾರಿ
ನೇತೃತ್ವದಲ್ಲಿ ತನಿಖೆ ನಡೆಸಲಾಗಿತ್ತು.
ತನಿಖೆಯಲ್ಲಿ ಹಿರಿಯಡ್ಕ ಪೋಲೀಸ್ ಠಾಣೆಯ ಎಸ್.ಐ ಸೇರಿದಂತೆ 11 ಜನರನ್ನು ಪೋಲೀಸರು ಬಂಧಿಸಿದ್ದರು.
ಹಾಗೂ ಹಸನಬ್ಬ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಮಣಿಪಾಲ ಆಸ್ಪತ್ರೆಗೆ ಸಾಗಿಸಲಾಗಿತ್ತು.
ಇದೀಗ ಈ ವರದಿ ಬಹಿರಂಗಗೊಂಡಿದ್ದು, ಹಸನಬ್ಬ ಸಾವಿಗೆ ಅವರ ತಲೆ ಮೇಲೆ ಇರುವ ಗಾಯವೇ ಕಾರಣ ಎನ್ನುವುದು ಸ್ಪಷ್ಟವಾಗಿದೆ.
ಇದೀಗ ಮರಣೋತ್ತರ ಪರೀಕ್ಷಾ ವರದಿಯನ್ನು ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಉಡುಪಿ ಜಿಲ್ಲಾ ಸರ್ಕಾರಿ ಅಭಿಯೋಜಕಿ ಶಾಂತಾ ಬಾಯಿ ಸಲ್ಲಿಸಿದ್ದಾರೆ.
ನ್ಯಾಯಾಧೀಶ ವೆಂಕಟೇಶ್ ನಾಯ್ಮ ಇವರಿಗೆ ಸಲ್ಲಿಸಲಾಗಿದ್ದು, ಪ್ರಕರಣದ ತನಿಖೆಯನ್ನು ಕಾರ್ಕಳ ಎಎಸ್ಪಿ ಹೃಷಿಕೇಶ್ ಸೋನಾವಣೆ ನಡೆಸಿದ್ದರು.