LATEST NEWS
ಜಾತಿ ಗಣತಿಯನ್ನು ಕಾಂಗ್ರೇಸ್ ಪಕ್ಷದವರೇ ವಿರೋಧಿಸುವುದು ಸರಿಯಲ್ಲ – ಮಾಜಿ ಸಚಿವ ರಮಾನಾಥ ರೈ

ಮಂಗಳೂರು ಎಪ್ರಿಲ್ 18: ಜಾತಿ ಗಣತಿಯನ್ನು ಕಾಂಗ್ರೇಸ್ ಪಕ್ಷದವರೇ ವಿರೋಧಿಸವುದು ಸರಿಯಲ್ಲ, ಕಾಂಗ್ರೇಸ್ ಪಕ್ಷದ ಪ್ರಣಾಳಿಕೆಯಲ್ಲಿರುವ ಪ್ರಮುಖ ಅಂಶ ಇದಾಗಿತ್ತು ಎಂದು ಕೆಪಿಸಿಸಿ ಉಪಾಧ್ಯಕ್ಷ ಬಿ.ರಮಾನಾಥ ರೈ ಹೇಳಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಸಾಮಾಜಿಕ ನ್ಯಾಯಕ್ಕೆ ಸಂಬಂಧಿಸಿದ ಎಲ್ಲ ಯೋಜನೆಗಳನ್ನು ಕಾಂಗ್ರೆಸ್ ಯಶಸ್ವಿಯಾಗಿ ಜಾರಿಗೊಳಿಸಿದೆ. ಆದ್ದರಿಂದ ಜಾತಿಗಣತಿಗೆ ಸಂಬಂಧಿಸಿದ ವರದಿ ಕೂಡ ಜಾರಿಯಾಗಲಿದೆ ಎಂದರು.

ಕಾಂಗ್ರೆಸ್ ಪಕ್ಷದ ಸಾಮಾಜಿಕ ನ್ಯಾಯ ಆಶಯದ ಪ್ರಮುಖ ಅಂಶ ಜಾತಿ ಗಣತಿ. ಇದು ರಾಹುಲ್ ಗಾಂಧಿ ಅವರ ಬಯಕೆಯೂ ಆಗಿತ್ತು. ಆದ್ದರಿಂದ ಪಕ್ಷದೊಳಗೆ ಇದರ ವಿರುದ್ಧ ಧ್ವನಿ ಏಳಬಾರದು’ ಎಂದು
ಸಮಾಜದಲ್ಲಿ ಅಸಮಾನತೆ ದೂರ ಮಾಡಲು, ಜಾತಿ ತಾರತಮ್ಯ ಹೋಗಲಾಡಿಸಲು ಮತ್ತು ದುರ್ಬಲ ವರ್ಗದವರ ಏಳಿಗೆಗಾಗಿ ಜಾತಿ ಗಣತಿಯ ವರದಿ ಜಾರಿಯಾಗಬೇಕು. ಆದ್ದರಿಂದ ದುರ್ಬಲ ವರ್ಗದವರು ಕೂಡ ವರದಿಯ ಬಗ್ಗೆ ಅಪಸ್ವರ ಎತ್ತಬಾರದು. ಜಾತಿ ಗಣತಿ ವರದಿ ಜಾರಿಯಾಗುವುದರಿಂದ ಯಾರಿಗೂ ತೊಂದರೆ ಆಗುವುದಿಲ್ಲ’ ಎಂದರು.
1 Comment