Connect with us

    DAKSHINA KANNADA

    ಬಡಪಾಯಿಗೆ ಕರಾಟೆ ಕಿಕ್, ಮೇಯರ್ ವಿರುದ್ಧ ಕೇಸ್ ಬುಕ್

    ಬಡಪಾಯಿಗೆ ಕರಾಟೆ ಕಿಕ್, ಮೇಯರ್ ವಿರುದ್ಧ ಕೇಸ್ ಬುಕ್

    ಮಂಗಳೂರು, ಅಕ್ಟೋಬರ್ 27: ವಾಚ್ ಮ್ಯಾನ ಪತ್ನಿಗೆ ಹಲ್ಲೆ ನಡೆಸಿದ ಮಂಗಳೂರು ಮಹಾನಗರ ಪಾಲಿಕೆ ಮೇಯರ್ ವಿರುದ್ಧ ಪಾಂಡೇಶ್ವರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಂಗಳೂರಿನ ಬಿಜೈ ರೋಡ್ ನ ಸಾಗರ್ಸ್ಸ್ ಪುಲಾಮಾರ್ ರಸಿಡೆಸ್ಸಿಯಲ್ಲಿ ವಾಸವಿರುವ ಮೇಯರ್ ಕವಿತಾ ಸನಿಲ್ ಮಕ್ಕಳ ಆಟದ ವಿಷಯವನ್ನು ದೊಡ್ಡದಾಗಿ ತೆಗೆದುಕೊಂಡು ಅಪಾರ್ಡ್ ಮೆಂಟ್ ನ ವಾಚ್ ಮ್ಯಾನ್ ಪುಂಡಲೀಕ ರ ಪತ್ನಿ ಕಮಲಾ ಅವರಿಗೆ ತನ್ನ ಕರಾಟೆ ಸ್ಟೈಲ್ ನಲ್ಲಿ ಮುಖ ಮೂತಿ ನೋಡದೆ ಚಚ್ಚಿದ್ದಾರೆ,ಮಗುವನ್ನೂ ಎತ್ತಿ ಎಸೆದಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಇದರಿಂದ ಕಮಲಾ ಅವರ ಬಾಯಿ ಹಾಗೂ ಕಿವಿಯಿಲ್ಲಿ ರಕ್ತದ ಗಾಯಗಳಾಗಿದೆ. ಈ ಸಂಬಂಧ ಪಾಂಡೇಶ್ವರ ಮಹಿಳಾ ಪೋಲೀಸ್ ಠಾಣೆಯಲ್ಲಿ ಕಮಲಾ ಮೇಯರ್ ಕವಿತಾ ಸನಿಲ್ ವಿರುದ್ಧ ದೂರು ನೀಡಿದ್ದಾರೆ. ಮೇಯರ್ ಆದ ಬಳಿಕ ಕವಿತಾ ಸನಿಲ್ ಒಂದಲ್ಲ ಒಂದು ರೀತಿಯಲ್ಲಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದು, ಈ ಬಾರಿ ಬಡಪಾಯಿಗೆ ಕರಾಟೆ ಕಿಕ್ ಕೊಟ್ಟು ಮತ್ತೆ ಪ್ರಚಾರದಲ್ಲಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply