LATEST NEWS
ರಾಷ್ಟ್ರೀಯ ಹೆದ್ದಾರಿಯಲ್ಲಿ ನೀರು ಹೋಗುವ ಕಂದಕದಲ್ಲಿ ವಾಹನ ಚಲಾಯಿಸಿದರೆ ಕೇಸ್
ರಾಷ್ಟ್ರೀಯ ಹೆದ್ದಾರಿಯಲ್ಲಿ ನೀರು ಹೋಗುವ ಕಂದಕದಲ್ಲಿ ವಾಹನ ಚಲಾಯಿಸಿದರೆ ಕೇಸ್
ಉಡುಪಿ ಅಗಸ್ಟ್ 21: ರಾಷ್ಟ್ರೀಯ ಹೆದ್ದಾರಿ ವಿಭಜಕಗಳ ನಡುವೆ ನೀರು ಹೋಗಲು ನಿರ್ಮಿಸಿರುವ ಕಂದಕಗಳ ನಡುವೆ ಅನೇಕ ದ್ವಿಚಕ್ರ ವಾಹನ ಸವಾರರು ರಸ್ತೆಯನ್ನು ದಾಟಿ ಹೋಗಲು ಬಳಸುತ್ತಿದ್ದು, ಅಂತಹ ವಾಹನ ಚಾಲಕರ ವಿರುದ್ದ ಪ್ರಕರಣ ದಾಖಲಿಸಲು ಜಿಲ್ಲಾಧಿಕಾರಿ ಆದೇಶ.
ರಾಷ್ಟ್ರೀಯ ಹೆದ್ದಾರಿ ವಿಭಜಕಗಳ ನಡುವೆ ನೀರು ಹೋಗಲು ನಿರ್ಮಿಸಿರುವ ಕಂದಕಗಳ ನಡುವೆ ದ್ವಿಚಕ್ರ ವಾಹನ ಚಲಾವಣೆ ಮಾಡುತ್ತಿದ್ದು, ಇದರಿಂದಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತಗಳು ಉಂಟಾಗಿ ಹಲವಾರು ಸಾವು ನೋವು ಸಂಭವಿಸಿರುತ್ತದೆ. ಈ ಹಿನ್ನಲೆಯಲ್ಲಿ ಈ ರೀತಿಯಾಗಿ ಹೆದ್ದಾರಿಯನ್ನು ದಾಟಿ ಹೋಗಲು ಪ್ರಯತ್ನಿಸುವುದನ್ನು ತಡೆಯವುದಕ್ಕಾಗಿ ಈ ಕಂದಕಕ್ಕೆ ತಡೆಯಾಗಿ ಕಂಬಿಗಳನ್ನು ನಿರ್ಮಾಣ ಮಾಡಲಾಗುತ್ತಿದೆ.
ಈ ನಡುವೆ ಕೆಲವು ವಾಹನ ಸವಾರರು ಈ ಕಂಬಿಗಳನ್ನು ತೆಗೆದು ಮತ್ತೆ ರಸ್ತೆ ದಾಟಲು ಪ್ರಯತ್ನಿಸುವುದಿರುವುದು ಕಂಡು ಬಂದಿದೆ. ಈ ಹಿನ್ನಲೆಯಲ್ಲಿ ಉಡುಪಿ ಜಿಲ್ಲಾಧಿಕಾರಿ ಈ ರೀತಿಯಾಗಿ ಕಂದಕದಲ್ಲಿ ನಿರ್ಮಿಸಲಾಗುವ ಕಂಬಗಳನ್ನು ಕಿತ್ತು ಹಾಕಿ ರಸ್ತೆ ದಾಟುತ್ತಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಮುಂದೆ ಯಾವುದೇ ವಾಹನ ಸವಾರರು ಈ ರೀತಿಯಾಗಿ ಕಂದಕಗಳಿಗೆ ನಿರ್ಮಿಸಿದ್ದ ಕಂಬಿಗಳನ್ನು ಕಿತ್ತು ಹಾಕುವುದು ಕಂಡು ಬಂದಲ್ಲಿ ಅಂತವರ ವಿರುದ್ದ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.