Connect with us

    LATEST NEWS

    ವಾರ್ತಾಭಾರತಿ ವರದಿಗಾರನ ಬಂಧನ ಸಮಗ್ರ ತನಿಖೆಗೆ ಮೊಯಿದ್ದಿನ್ ಬಾವಾ ಒತ್ತಾಯ

    ಬೆಂಗಳೂರು, ಸೆಪ್ಟೆಂಬರ್ 12 : ಬಂಟ್ವಾಳ ಪತ್ರಕರ್ತನ  ಬಂಧನ ಪ್ರಕರಣದ ಸಮಗ್ರ ತನಿಖೆ ಮಾಡುವಂತೆ ಶಾಸಕ ಮೊಯಿದಿನ್ ಬಾವಾ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಈ ಸಂಬಂಧ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಮೊಯಿದಿನ್ ಬಾವಾ ನೇತೃತ್ವದ ನಿಯೋಗ ಮನವಿ ಸಲ್ಲಿಸಿತು.

    ಘಟನೆಯ ಹಿನ್ನೆಲೆ :

    ಸುಳ್ಳು ಮಾಹಿತಿಯ ಸುದ್ದಿಯನ್ನು ಪತ್ರಿಕೆಯಲ್ಲಿ ಪ್ರಕಟಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಾರ್ತಾ ಭಾರತಿ  ಪತ್ರಿಕೆಯ ವರದಿಗಾರರನ್ನು ಬಂಟ್ವಾಳ ಪೊಲೀಸರು ಬಂಧಿಸಿದ್ದರು. ಆರ್ ಎಸ್ ಎಸ್  ಕಾರ್ಯಕರ್ತ ಶರತ್ ಮಡಿವಾಳ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಪ್ರಮುಖ ಆರೋಪಿ ಎಂದು ಹೇಳಲಾಗುವ ಕಲಂದರ್ ಎಂಬುವರ ಮನೆಗೆ ಪೊಲೀಸರು ತನಿಖೆಗೆ ತೆರಳಿದ್ದರು. ಈ ಸಂದರ್ಭದಲ್ಲಿ ಮನೆಯಲ್ಲಿದ್ದ ಪವಿತ್ರ ಕುರಾನ್ ಗ್ರಂಥವನ್ನು ಪೊಲೀಸರು ನೆಲಕ್ಕೆ ಬಿಸಾಕಿ ಅವಹೇಳನ ಮಾಡಿದ್ದಾರೆ ಹಾಗೂ ಮನೆಯ ಮಂದಿ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ವಾರ್ತಾ ಭಾರತಿ ಯ ವರದಿಗಾರ ಇಮ್ತಿಯಾಝ್ ಪಾಷಾ ತುಂಬೆ ಪತ್ರಿಕೆಯಲ್ಲಿ ವರದಿ ಮಾಡಿದ್ದರು.  ಈ ನಡುವೆ ಈ ರೀತಿಯ ಘಟನೆ ನಡೆದಿಲ್ಲ. ಪವಿತ್ರ ಕುರಾನ್ ಗ್ರಂಥಕ್ಕೆ ಅಪಮಾನ ಮಾಡಿದ ಕೃತ್ಯ ನಡೆದಿಲ್ಲ ಎಂದು ದಕ್ಷಿಣ ಕನ್ನಡ ಪೊಲೀಸ್ ವರಿಷ್ಠಾಧಿಕಾರಿ ಸುಧೀರ್ ಕುಮಾರ್ ರೆಡ್ಡಿ ಸ್ಪಷ್ಟಪಡಿಸಿದ್ದರು. ಈ ಬಗ್ಗೆ ಸಂಪೂರ್ಣ ವಿಡಿಯೋ ಚಿತ್ರೀಕರಣ ಇರುವುದಾಗಿಯೂ ತಿಳಿಸಿದ್ದರು. ಈ ವಿಚಾರದಲ್ಲಿ ಸುಳ್ಳು ಸುದ್ದಿ ಹರಡಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆಯನ್ನು ನೀಡಿದ್ದರು. ಆದರೆ ವಾರ್ತಾಭಾರತಿ ಪತ್ರಿಕೆಯಲ್ಲಿ  ಪವಿತ್ರ ಕುರಾನ್ ಗೆ ಅವಮಾನ ಮಾಡಿದ ಸುದ್ದಿ ಪ್ರಕಟವಾದ ಹಿನ್ನೆಲೆಯಲ್ಲಿ ಬಂಟ್ವಾಳ ಪೊಲೀಸರು ವರದಿಗಾರ ಇಮ್ತಿಯಾಝ್ ಪಾಷಾ ತುಂಬೆ ಅವರ ಮೇಲೆ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ.

    ವಾರ್ತಾಭಾರತಿ ಪತ್ರಕರ್ತನ  ಬಂಧನ ಹಿನ್ನಲೆಯಲ್ಲಿ ಹಲವಾರು ಸಂಘಟನೆಗಳು ಖಂಡನೆ ವ್ಯಕ್ತಪಡಿಸಿದ್ದವು, ಕಾರ್ಯನಿರತ ಪತ್ರಕರ್ತರ ಸಂಘ ಈ ಬಂಧನವನ್ನು ಖಂಡಿಸಿ ಜಿಲ್ಲಾಡಳಿತಕ್ಕೆ ಮನವಿಯನ್ನು ಸಲ್ಲಿಸಿದ್ದರು.

    ಈ ಹಿನ್ನಲೆಯಲ್ಲಿ ಮೊಯಿದ್ದಿನ್ ಬಾವಾ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಮೊಯಿದಿನ್ ಬಾವಾ ನೇತೃತ್ವದ ನಿಯೋಗ ಮನವಿ ಸಲ್ಲಿಸಿ. ಪ್ರಕರಣದ ಸಮಗ್ರ ತನಿಖೆಗೆ ಮನವಿ ಮಾಡಿದೆ.

    Share Information
    Advertisement
    Click to comment

    You must be logged in to post a comment Login

    Leave a Reply