Connect with us

DAKSHINA KANNADA

ಡಿವೈಡರ್ ಮೇಲೆ ಹಾರಿ ಸ್ಕೂಟರ್​​ಗೆ ಡಿಕ್ಕಿ ಹೊಡೆದ ಕಾರು: ತಾಯಿ ಸಾವು, ಮಗಳ ಸ್ಥಿತಿ ಗಂಭೀರ!

ಉಳ್ಳಾಲ, ಮೇ 20: ತೊಕ್ಕೊಟ್ಟು ಮೇಲ್ವೇತುವೆಯಲ್ಲಿ ತಾಯಿ- ಮಗಳು ಸಂಚರಿಸುತ್ತಿದ್ದ ಸ್ಕೂಟರಿಗೆ ವಿರುದ್ಧ ದಿಕ್ಕಿನಲ್ಲಿ ಬರುತ್ತಿದ್ದ ಕಾರು ಡಿವೈಡರ್ ನೆಗೆದು ಮುಖಾಮುಖಿ ಡಿಕ್ಕಿಯಾದ ಪರಿಣಾಮ ಮಹಿಳೆ ದಾರುಣ ಸಾವನ್ನಪ್ಪಿರುವ ಘಟನೆ
ನಡೆದಿದೆ.

ಕುಂಪಲ ಆಶ್ರಯ ಕಾಲೋನಿ ನಿವಾಸಿ ವಸಂತಿ ನಾಯರ್ (45) ಮೃತ ಮಹಿಳೆ. ವಸಂತಿ ಇಂದು ಬೆಳಗ್ಗೆ ಜಪ್ಪಿನ ಮೊಗರಿನಲ್ಲಿರುವ ತನ್ನ ತಾಯಿಯನ್ನು ನೋಡಲು ಮಗಳ ಜೊತೆ ತೆರಳುತ್ತಿರುವ ವೇಳೆ ಅಪಘಾತ ನಡೆದಿದೆ. ಮೇಲ್ವೇತುವೆ ಮೇಲಿಂದ ತಲಪಾಡಿಗೆ ಧಾವಿಸುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ನೆಗೆದು ಸ್ಕೂಟರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಸ್ಕೂಟರ್ ಹಿಂಬದಿ ಸವಾರೆಯಾಗಿದ್ದ ವಸಂತಿ ಮೇಲ್ವೇತುವೆಯಿಂದ 20 ಅಡಿಯಷ್ಟು ಆಳಕ್ಕೆ ಎಸೆಯಲ್ಪಟ್ಟಿದ್ದು ಸ್ಥಳದಲ್ಲೇ ದಾರುಣ ಸಾವನ್ನಪ್ಪಿದ್ದಾರೆ.

ಸ್ಕೂಟರ್ ಚಲಾಯಿಸುತ್ತಿದ್ದ ವಸಂತಿ ಅವರ ಮಗಳು ಶ್ರೀಜ ಅವರೂ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಾರು ಚಾಲಕನ ಅತಿ ವೇಗದ ಮತ್ತು ಧಾವಂತದ ಚಾಲನೆಯೇ ಘಟನೆಗೆ ಕಾರಣ ಎನ್ನಲಾಗುತ್ತಿದೆ. ವಸಂತಿಯವರ ಪತಿ ಇತ್ತೀಚೆಗಷ್ಟೆ ಅನಾರೋಗ್ಯದಿಂದ ಸಾವನ್ನಪ್ಪಿದ್ದರು. ಮೃತ ವಸಂತಿ ಓರ್ವ ಪುತ್ರಿ ಪುತ್ರನನ್ನುಅಗಲಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *