LATEST NEWS
ಮಂಗಳೂರು – ಸಿಟಿ ಸೆಂಟರ್ ಬಳಿ ಬೆಂಕಿಗಾಹುತಿಯಾದ ಕಾರು
ಮಂಗಳೂರು ಡಿಸೆಂಬರ್ 16: ಮಂಗಳೂರಿನಲ್ಲಿ ಮತ್ತೊಂದು ಕಾರು ಬೆಂಕಿಗಾಹುತಿಯಾಗಿರುವ ಘಟನೆ ನಗರದ ಸಿಟಿ ಸೆಂಟರ್ ಸಮೀಪ ನಡೆದಿದೆ. ಮಹಿಳೆಯೊಬ್ಬರು ಕಾರನ್ನು ಚಲಾಯಿಸುತ್ತಾ ಫ್ಲ್ಯಾಟ್ ಬಳಿ ತಂದು ನಿಲ್ಲಿಸಿದೊಡನೆ ಹೊಗೆ ಕಾಣಿಸಿಕೊಂಡಿದೆ ಎನ್ನಲಾಗಿದೆ. ತಕ್ಷಣ ಅವರು ಅದರಿಂದ ಇಳಿದಿದ್ದಾರೆ. ಅಷ್ಟರಲ್ಲೇ ಕಾರು ಬೆಂಕಿಗೆ ಆಹುತಿಯಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಸ್ಥಳೀಯರು ಅಗ್ನಿಶಾಮಕಕ್ಕೆ ಕರೆ ಮಾಡಿದ್ದು ಘಟನಾ ಸ್ಥಳಕ್ಕೆ ಬಂದ ಅಗ್ನಿಶಾಮಕ ತಂಡ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಘಟನೆಯಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ. ಇತ್ತೀಚೆಗೆ ಲೇಡಿಹಿಲ್, ಕದ್ರಿ, ಅಡ್ಯಾರ್ ಮತ್ತು ಸುರತ್ಕಲ್ ಗಳಲ್ಲಿ ಕಾರುಗಳು ಬೆಂಕಿಗಾಹುತಿಯಾದ ಘಟನೆಗಳು ಸಂಭವಿಸಿತ್ತು.