LATEST NEWS
ಕಂಬಳ ಖ್ಯಾತಿಯ ಗುರುವಪ್ಪ ಪೂಜಾರಿ ಕೆದುಬರಿ ರಸ್ತೆ ಅಪಘಾತದಲ್ಲಿ ಸಾವು

ಮಂಗಳೂರು ಅಗಸ್ಟ್ 08: ಕಾರು ಹಾಗೂ ಸ್ಕೂಟರ್ ನಡುವೆ ನಡೆದ ಅಪಘಾತದಲ್ಲಿ ಕಂಬಳ ಖ್ಯಾತಿಯ ಗುರುವಪ್ಪ ಪೂಜಾರಿ ಕೆದುಬರಿ (78) ಮೃತಪಟ್ಟಿರುವ ಘಟನೆ ನಗರ ಹೊರವಲಯದ ಗುರುಪುರ ಸೇತುವೆ ಸಮೀಪದ ಕುಕ್ಕುದಕಟ್ಟೆಯಲ್ಲಿ ನಡೆದಿದೆ.
ಗುರುವಪ್ಪ ಪೂಜಾರಿ ಕೆದುಬರಿಯವರು ಕುಕ್ಕುದಕಟ್ಟೆಯಲ್ಲಿರುವ ಡೈರಿಗೆ ಹಾಲು ಹಾಕಲು ತನ್ನ ಸ್ಕೂಟಿಯಲ್ಲಿ ಹೋಗುತ್ತಿದ್ದರು. ಮಂಗಳೂರಿನಿಂದ ಗುರುಪುರದತ್ತ ಹೋಗುತ್ತಿದ್ದ ಸುಂಕದಕಟ್ಟೆಯ ವ್ಯಕ್ತಿಯೋರ್ವರ ಕಾರು ಸ್ಕೂಟಿಗೆ ಢಿಕ್ಕಿ ಹೊಡೆದಿದೆ.

ಅಪಘಾತದ ರಭಸಕ್ಕೆ ಸ್ಕೂಟಿ ಅಪ್ಪಚ್ಚಿಯಾಗಿದ್ದು, ಗುರುವಪ್ಪ ರಸ್ತೆಗೆ ಎಸೆಯಲ್ಪಟ್ಟು ತಲೆ, ಕೈಕಾಲಿಗೆ ಗಂಭೀರ ಗಾಯವಾಗಿದ್ದ ಅವರನ್ನು ತಕ್ಷಣ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತು. ಅವರು ದಾರಿಮಧ್ಯೆ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.
ಮೃತರು ಮೂವರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಕಂಬಳ ಪ್ರೇಮಿಗಳನ್ನು ಅಗಲಿದ್ದಾರೆ.