LATEST NEWS
ಇನ್ನೋವಾ ಓಮ್ನಿ ಡಿಕ್ಕಿ ಸ್ಥಳದಲ್ಲೇ ಇಬ್ಬರ ಸಾವು
ಇನ್ನೋವಾ ಓಮ್ನಿ ಡಿಕ್ಕಿ ಸ್ಥಳದಲ್ಲೇ ಇಬ್ಬರ ಸಾವು
ಮಂಗಳೂರು ಎಪ್ರಿಲ್ 9: ಇನ್ನೋವಾ ಹಾಗೂ ಓಮ್ನಿ ಕಾರು ಡಿಕ್ಕಿ ಹೊಡೆದು ಸ್ಥಳದಲ್ಲೇ ಇಬ್ಬರು ಸಾವನಪ್ಪಿದ ಘಟನೆ ಕಾರ್ಕಳದಲ್ಲಿ ನಡೆದಿದೆ.
ಕಾರ್ಕಳದ ನೆಲ್ಲಿಕಾರು ಎಂಬಲ್ಲಿ ಈ ಘಟನೆ ನಡೆದಿದ್ದು, ಪ್ರವಾಸ ನಿಮಿತ್ತ ಓಮ್ನಿ ಕಾರಿನಲ್ಲಿ 9 ಮಂದಿ ಹಾಗೂ ಇನ್ನೋವಾ ಕಾರಿನಲ್ಲಿ 6 ಮಂದಿ ಪ್ರಯಾಣಿಸುತ್ತಿದ್ದರು ಎಂದು ಹೇಳಲಾಗಿದೆ.
ಈ ದುರ್ಘಟನೆಯಲ್ಲಿ ಇಬ್ಬರು ಮೃತರಾಗಿದ್ದರು, ಮೃತರನ್ನು ತೀರ್ಥಹಳ್ಳಿಯ ಸೋಮಶೇಖರ್ ಹಾಗೂ ಅವರ ತಾಯಿ ರತ್ನಮ್ಮ ಎಂದು ಗುರುತಿಸಲಾಗಿದೆ. ಈ ಘಟನೆಯಲ್ಲಿ ಹಲವರಿಗೆ ಗಾಯಗಳಾಗಿದ್ದು, ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಸಂಬಂಧ ಮೂಡಬಿದ್ರೆ ಠಾಣೆಯಲ್ಲಿ ಪ್ರಕರಣಣ ದಾಖಲಾಗಿದೆ
You must be logged in to post a comment Login