KARNATAKA
ಚಿಕ್ಕಬಳ್ಳಾಪುರ – ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ ಕಾಲುಗೆ ಬಿದ್ದ ಕಾರು – ಮೂವರು ಕೆಪಿಟಿಸಿಎಲ್ ಸಿಬ್ಬಂದಿ ಸಾವು

ಚಿಕ್ಕಬಳ್ಳಾಪುರ ಜೂನ್ 07: ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ರಸ್ತೆ ಬದಿಯ ಕಾಲುವೆಗೆ ಉರುಳಿ ಬಿದ್ದು ಬೆಸ್ಕಾಂ ನ ಮೂವರು ಸಿಬ್ಬಂದಿ ಸಾವನಪ್ಪಿದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ವಾಟದಹೊಸಹಳ್ಳಿ ಗ್ರಾಮದಲ್ಲಿ ನಡೆದಿದೆ. ಅಪಘಾತದಲ್ಲಿ ಓರ್ವ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಕೆಪಿಟಿಸಿಎಲ್ ವೇಣಗೋಪಾಲ್ (34), ಶ್ರೀಧರ್ (35), ಬೆಸ್ಕಾಂ ಲೈನ್ಮ್ಯಾನ್ ಮಂಜಪ್ಪ (35) ಮೃತ ದುರ್ದೈವಿಗಳು. ಕಳೆದ ರಾತ್ರಿಯೇ ಅಪಘಾತ ಸಂಭವಿಸಿರುವ ಶಂಕೆ ವ್ಯಕ್ತವಾಗಿದೆ.

ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ ಕಾಲುವೆಗೆ ಕಾರು ಉರುಳಿದೆ. ಅಪಘಾತದ ತೀವ್ರತೆಗೆ ಓರ್ವ ಪ್ರಯಾಣಿಕ ಮರಕ್ಕೆ ಸಿಲುಕಿ ನೇತಾಡಿದ್ದಾನೆ. ಬೆಸ್ಕಾಂ ಸಿಬ್ಬಂದಿ ಪ್ರಯಾಣಿಸುತ್ತಿದ್ದ ಬ್ರಿಜಾ ಕಾರು ಇದಾಗಿದೆ ಎನ್ನಲಾಗಿದೆ.