LATEST NEWS
ಮರಕ್ಕೆ ಗುದ್ದಿ ಸುಟ್ಟು ಭಸ್ಮವಾದ 2 ಕೋಟಿ ಮೌಲ್ಯದ ಪೋರ್ಷ್ ಕಾರು

ನವದೆಹಲಿ ಮೇ 12 : 2 ಕೋಟಿ ಮೌಲ್ಯದ ಕಾರು ಮರಕ್ಕೆ ಗುದ್ದಿ ಬೆಂಕಿ ಹತ್ತಿಕೊಂಡ ಪರಿಣಾಮ ಸಂಪೂರ್ಣ ಸುಟ್ಟು ಭಸ್ಮವಾದ ಘಟನೆ ದೆಹಲಿ ಸಮೀಪದ ಗುರುಗ್ರಾಮದಲ್ಲಿ ನಡೆದಿದೆ.
ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ 2 ಕೋಟಿ ರೂಪಾಯಿ ಮೌಲ್ಯದ ಪೋರ್ಷ್ ಕಾರು ಮರಕ್ಕೆ ಢಿಕ್ಕಿ ಹೊಡೆದಿದ್ದು, ಕಾರು ಪಲ್ಟಿಯಾಗಿ ಮೇಲಕ್ಕೆ ಚಿಮ್ಮಿದೆ. ಬಳಿಕ ಬೆಂಕಿ ಹೊತ್ತಿಕೊಂಡು ಭಸ್ಮವಾಗಿದೆ.

ಕಾರಿನ ವೇಗವು ತುಂಬಾ ಹೆಚ್ಚಿತ್ತು, ಇದರಿಂದಾಗಿ ಚಾಲಕನಿಗೆ ನಿಭಾಯಿಸಲು ಅವಕಾಶ ಸಿಗಲಿಲ್ಲ.. ಅಪಘಾತದ ನಂತರ, ಕಾರು ಬೆಂಕಿಯ ಉಂಡೆಯಾಗಿ ಮಾರ್ಪಟ್ಟಿತ್ತು. ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಕಾರಿಗೆ ಬೆಂಕಿ ಹೊತ್ತಿಕೊಳ್ಳುವ ಮುನ್ನವೇ ಚಾಲಕ ಕಾರಿನಿಂದ ಇಳಿದಿದ್ದಾನೆ. ಇದರಿಂದಾಗಿ ಆತನ ಪ್ರಾಣ ಉಳಿಯಿತು. ಬೆಂಕಿ ಎಷ್ಟು ಭೀಕರವಾಗಿತ್ತೆಂದರೆ ಸ್ವಲ್ಪ ಹೊತ್ತಿನಲ್ಲೇ ಕಾರು ಸುಟ್ಟು ಬೂದಿಯಾಯಿತು ಎನ್ನಲಾಗಿದೆ.