LATEST NEWS
ಜಪಾನ್ ಎಂಬ ದೇಶವೇ ಮಾಯವಾಗಿ ಹೋಗಬಹುದು?
ಟೋಕಿಯೋ, ಮಾರ್ಚ್ 07: “ನಮ್ಮ ದೇಶದಲ್ಲಿ ಮಕ್ಕಳ ಜನನ ಸಂಖ್ಯೆ ಕಡಿಮೆಯಾಗುತ್ತಿದೆ. ಈ ಪ್ರಕ್ರಿಯೆ ಮುಂದುವರಿದರೆ, ಮುಂದೊಂದು ದಿನ ಜಪಾನ್ ಎಂಬ ದೇಶವೇ ಮಾಯವಾಗಿ ಹೋಗಬಹುದು’ – ಇಂಥ ಒಂದು ಆತಂಕವನ್ನು ಆ ದೇಶದ ಪ್ರಧಾನಿ ಫ್ಯೂಮೋ ಕಿಶಿದಾ ಸಲಹೆಗಾರ್ತಿ ಮಸಾಕೊ ಮೊರಿ ವ್ಯಕ್ತಪಡಿಸಿದ್ದಾರೆ.
ಚೀನದಲ್ಲಿ ವೃದ್ಧರ ಸಂಖ್ಯೆ ಹೆಚ್ಚುತ್ತಿದೆ, ಯುವಕರ ಸಂಖ್ಯೆ ಕುಸಿಯುತ್ತಿದೆ ಎಂಬ ಆತಂಕದ ನಡುವೆಯೇ ಈ ಬೆಳವಣಿಗೆ ಜಪಾನ್‌ನಲ್ಲಿಯೂ ಕಂಡು ಬಂದಿದೆ. ಕಳೆದ ವರ್ಷ ಜಪಾನ್‌ನಲ್ಲಿ ಜನನಕ್ಕಿಂತ ಮರಣಪ್ರಮಾಣ ದುಪ್ಪಟ್ಟಾಗಿತ್ತು. ಎಂಟು ಲಕ್ಷ ಮಕ್ಕಳು ಜನಿಸಿದ್ದರೆ, 15.58 ಲಕ್ಷ ಮಂದಿ ಅಸುನೀಗಿದ್ದಾರೆ.
ಆ ದೇಶದ ಜನಸಂಖ್ಯೆ 12.8 ಕೋಟಿಯಿಂದ 12.46 ಕೋಟಿಗಿಳಿದಿದೆ. ಜನನ ಪ್ರಮಾಣ ಕುಸಿತ ನಿರೀಕ್ಷೆಗಿಂತ ವಿಪರೀತ ಹೆಚ್ಚಾಗಿದೆ. ಇದರಿಂದ ಎಚ್ಚೆತ್ತಿರುವ ಪ್ರಧಾನಿ ಕಿಶಿದ ಮಕ್ಕಳ ಮೇಲೆ, ಕುಟುಂಬದ ಹಣ ವ್ಯಯಿಸುವುದನ್ನು ದುಪ್ಪಟ್ಟು ಮಾಡುವುದಾಗಿ ಘೋಷಿಸಿದ್ದಾರೆ. ಜಪಾನ್‌ನಲ್ಲಿ 65 ವರ್ಷ ಮೇಲ್ಪಟ್ಟವರ ಸಂಖ್ಯೆ ಕಳೆದ ವರ್ಷಕ್ಕಿಂತ ಶೇ.29ರಷ್ಟು ಹೆಚ್ಚಾಗಿದೆ.