DAKSHINA KANNADA
ಕ್ಯಾಂಪ್ಕೋ 26.22 ಕೋಟಿ ಲಾಭ

ಕ್ಯಾಂಪ್ಕೋ 26.22 ಕೋಟಿ ಲಾಭ
ಮಂಗಳೂರು ಸೆಪ್ಟೆಂಬರ್ 18: ಸಹಕಾರಿ ಕ್ಷೇತ್ರದ ಕ್ಯಾಂಪ್ಕೋ 2016- 17 ನೇ ಸಾಲಿನಲ್ಲಿ 1600 ಕೋಟಿ ರೂಪಾಯಿ ಗೂ ಅಧಿಕ ವ್ಯವಹಾರ ನಡೆಸಿದ್ದು 26.22 ಕೋಟಿ ರೂಪಾಯಿ ನಿವ್ವಳ ಲಾಭ ಗಳಿಸಿದೆ ಎಂದು ಕ್ಯಾಂಪ್ಕೋ ಅಧ್ಯಕ್ಷ ಎಸ್ ಆರ್ ಸತೀಶ್ ಚಂದ್ರ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು 2016-17 ನೇ ಸಾಲಿನಲ್ಲಿ ಅಡಿಕೆ ಖರೀದಿ ಹಾಗೂ ಮಾರಾಟ , ಕೊಕ್ಕೊ, ರಬ್ಬರ್ ಖರೀದಿ ಹಾಗೂ ಮಾರಾಟ ಸೇರಿದಂತೆ ಚಾಕಲೇಟ್ ಮಾರಾಟ ವ್ಯವಹಾರದಲ್ಲಿ ಲಾಭಾಂಶ ಹೆಚ್ಚಿದೆ ಎಂದು ಅವರು ತಿಳಿಸಿದರು .ಕ್ಯಾಂಪ್ಕೋ ಕೃಷಿ ಉತ್ಪನ್ನಗಳಾದ ಅಡಿಕೆ ,ಕೊಕ್ಕೋ ,ರಬ್ಬರ್ ಬಳಿಕ ಈಗ ಕಾಳುಮೆಣಸು ಖರೀದಿ ವ್ಯವಹಾರದಲ್ಲಿ ತೊಡಗಿದೆ ಎಂದು ಅವರು ಹೇಳಿದರು . ಈ ಸಾಲಿನಲ್ಲಿ 2.20 ಕೋಟಿ ರೂಪಾಯಿ ಮೌಲ್ಯದ 38.04 ಮೆಟ್ರಿಕ್ ಟನ್ ಕರಿಮೆಣಸು ಖರೀದಿ ಮಾಡಲಾಗಿದೆ . ಕರಿಮೆಣಸು ಸಂಸ್ಕರಣೆ ಹಾಗೂ ಪ್ಯಾಕಿಂಗ್ ಗಾಗಿ ಕೇರಳದ ಕೋಯಿಕ್ಕೊಡ್ ನಲ್ಲಿರುವ ಭಾರತೀಯ ಸಾಂಬಾರ ಪದಾರ್ಥಗಳ ಸಂಶೋಧನಾ ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ ಎಂದು ಅವರು ಹೇಳಿದರು.

ಕ್ಯಾಂಪ್ಕೋ ಬ್ರ್ಯಾಂಡ್ ನಲ್ಲಿ ಚಿಕ್ಕ ಹಾಗೂ ಮಧ್ಯಮ ಪ್ಯಾಕ್ ಗಳಲ್ಲಿ ಉತ್ತಮ ಗುಣಮಟ್ಟದ ಕರಿಮೆಣಸು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತಿದೆ ಎಂದು ಅವರು ಸ್ಪಷ್ಟಪಡಿಸಿದರು. ಕ್ಯಾಂಪ್ಕೋ 2016-17 ನೇ ಸಾಲಿನಲ್ಲಿ 1308.27 ಕೋಟಿ ರೂಪಾಯಿಗಳ ಮೌಲ್ಯದ 53,720,72 ಮೆಟ್ರಿಕ್ ಟನ್ ಅಡಿಕೆ ಖರೀದಿಸಿದೆ ಎಂದು ಹೇಳಿದ ಅವರು ಕ್ಯಾಂಪ್ಕೋ 13,328,15 ಮೆಟ್ರಿಕ್ ಟನ್ ಚಾಕ್ಲೇಟ್ ಉತ್ಪಾದಿಸಿದೆ ಎಂದು ಅವರು ತಿಳಿಸಿದರು .