DAKSHINA KANNADA
ಕ್ಯಾಂಪ್ಕೋದ ನೂತನ ವ್ಯವಸ್ಥಾಪಕ ನಿರ್ದೇಶಕರಾಗಿ ಡಾ.ಬಿ.ವಿ.ಸತ್ಯನಾರಾಯಣ ನೇಮಕ

ಮಂಗಳೂರು ಮೇ 1: ದೇಶದ ಪ್ರತಿಷ್ಠಿತ ಬಹುರಾಜ್ಯ ಸಹಕಾರಿ ಸಂಸ್ಥೆಯಾದ ಕ್ಯಾಂಪ್ಕೊದ ನೂತನ ವ್ಯವಸ್ಥಾಪಕ ನಿರ್ದೇಶಕರಾಗಿ ಡಾ.ಬಿ.ವಿ.ಸತ್ಯನಾರಾಯಣ ನೇಮಕಗೊಂಡಿದ್ದಾರೆ.
ಎಪ್ರಿಲ್ 23 ರಂದು ನಡೆದ ಕ್ಯಾಂಪ್ಕೋದ ಆಡಳಿತ ಮಂಡಳಿಯ ಸಭೆಯಲ್ಲಿ ಸಂಸ್ಥೆಯನ್ನು ಮುನ್ನಡೆಸುವ ಮಹತ್ತರ ಜವಾಬ್ದಾರಿಯನ್ನು ಡಾ.ಬಿ.ವಿ. ಸತ್ಯ ನಾರಾಯಣ ಅವರಿಗೆ ವಹಿಸುವ ನಿರ್ಣಯವನ್ನು ಅವಿರೋಧವಾಗಿ ತೆಗೆದುಕೊಂಡಿದೆ.
ಹಾಲಿ ವ್ಯವಸ್ಥಾಪಕ ನಿರ್ದೇಶಕ ಎಚ್.ಎಮ್.ಕೃಷ್ಣಕುಮಾರ್ ಅವರ ಅಧಿಕಾರ ಅವಧಿ ಇದೇ ತಿಂಗಳ 30ಕ್ಕೆ ಕೊನೆಗೊಂಡ ಹಿನ್ನೆಲೆಯಲ್ಲಿ ಡಾ.ಬಿ.ವಿ.ಸತ್ಯನಾರಾಯಣ ನೇಮಕಗೊಂಡು ಮೇ 1 ರಿಂದ ಅನ್ವಯವಾಗುವಂತೆ ವ್ಯವಸ್ಥಾಪಕ ನಿರ್ದೇಶಕ ರಾಗಿ ಕಾರ್ಯನಿರ್ವಹಿಸಲಿದ್ದಾರೆ.
