Connect with us

    DAKSHINA KANNADA

    ತಡರಾತ್ರಿ ಸದ್ದು ಮಾಡುತ್ತಿರುವ ಮನೆಗಳ ಕಾಲಿಂಗ್ ಬೆಲ್ ಗಳು : ಆತಂಕದಲ್ಲಿ ಬನ್ನೆಂಗಳ ಗ್ರಾಮಸ್ಥರು

    ತಡರಾತ್ರಿ ಸದ್ದು ಮಾಡುತ್ತಿರುವ ಮನೆಗಳ ಕಾಲಿಂಗ್ ಬೆಲ್ ಗಳು : ಆತಂಕದಲ್ಲಿ ಬನ್ನೆಂಗಳ ಗ್ರಾಮಸ್ಥರು

    ಪುತ್ತೂರು, ಡಿಸೆಂಬರ್ 16: ಉಪ್ಪಿನಂಗಡಿ ಪ್ರದೇಶದಲ್ಲಿ ತಡರಾತ್ರಿ ಮನೆಯ ಕಾಲಿಂಗ್ ಬೆಲ್ ಗಳು ಸದ್ದು ಮಾಡಲಾರಂಭಿಸಿವೆ. ಕಳೆದ ಕೆಲವು ದಿನಗಳಿಂದ ಈ ವಿದ್ಯಮಾನ ಈ ಪರಿಸರದಲ್ಲಿ ನಿರಂತರವಾಗಿ ನಡೆಯುತ್ತಿದ್ದು, ಸ್ಥಳೀಯರಲ್ಲಿ ಭೀತಿಗೆ ಕಾರಣವಾಗಿದೆ.

    ಉಪ್ಪಿನಂಗಡಿಯ ಬನ್ನೆಂಗಳ ಪರಿಸರದ ಮನೆಗಳ ಕಾಲಿಂಗ್ ಬೆಲ್ ಗಳನ್ನೂ ತಡರಾತ್ರಿ ಬಾರಿಸಿ ಆತಂಕ ಸೃಷ್ಟಿಸಲಾಗುತ್ತದೆ.

    ಯಾವೋದು ದುಷ್ಕರ್ಮಿಗಳ ತಂಡ ಈ ಕೃತ್ಯದ ಹಿಂದೆ ಕಾರ್ಯವೆಸಗುತ್ತಿದೆ ಎಂದು ಶಂಕಿಸಲಾಗಿದೆ.

    ಬನ್ನೆಂಗಳ ಶಾಲೆ ಬಳಿ ಇರುವ ಯೋಗೀಶ್ ಪೈ ಅವರ ಮನೆಯ ಕಾಲಿಂಗ್ ಬೆಲ್ಲನ್ನು ಕಳೆದ ರಾತ್ರಿ ಸುಮಾರು 2 ಗಂಟೆಗೆ ಹೊತ್ತಿಗೆ ಬಾರಿಸಲಾಗಿದೆ.

    ಈ ಸಂದರ್ಭದಲ್ಲಿ ಮನೆಯವರು ಯಾರೆಂದು ಪ್ರಶ್ನಿಸಿದಾಗ ಮೌನವಾಗಿದ್ದ ತಂಡ, ಮನೆಯ ಲೈಟ್ ಆರಿಸಿದ ಕೂಡಲೇ ಮತ್ತೆ ಕಾಲಿಂಗ್ ಬೆಲ್ ಬಾರಿಸಿದೆ.

    ಅದರೆ ಮನೆಯವರು ಬಅಗಿಲು ತೆರೆಯದೇ ಇದ್ದರಿಂದ ತಂಡ ಬೈಕಿನಲ್ಲಿ ಕತ್ತಲೆಯಲ್ಲಿ ಪರಾರಿಯಾಗಿದೆ.

    ಈ ಬಗ್ಗೆ ಸ್ಥಳೀಯ  ಪೊಲೀಸ್ ಠಾಣೆಗೆ ಯೋಗೀಶ್ವರ್ ದೂರುನೀಡಿದ್ದಾರೆ.ಈ ವಿದ್ಯಮಾನಗಳು ತಡರಾತ್ರಿ ಸುಮಾರು 2 ರಿಂದ 3 ಗಂಟೆಯ ಸಮಯದಲ್ಲಿ ಸಂಭವಿಸುತ್ತಿವೆ.

    ಈ ರೀತಿಯ ಘಟನೆಗಳು ನಿರಂತರವಾಗಿ ಇಲ್ಲಿನ ಪರಿಸರದ ಹಲವಾರು ಮನೆಗಳಲ್ಲಿ ನಡೆದಿದೆ ಎಂದು ಹೇಳಲಾಗಿದೆ.

    ರಾತ್ರಿಯ ವೇಳೆ ಮನೆಯ ಬಾಗಿಲು ತೆರೆಸಿ ದುಷ್ಕೃತ್ಯ  ಎಸಗಲು  ತಂಡವೊಂದು ಈ ಭಾಗದಲ್ಲಿ ಕಾರ್ಯಾಚರಿಸುತ್ತಿದೆ ಎಂದು ಶಂಕಿಸಲಾಗಿದೆ.

    ಈ ಘಟನೆಗಳ ಕುರಿತು ಪೊಲೀಸರು  ಈಗಾಗಲೇ ತನಿಖೆ ಆರಂಭಿಸಿದ್ದು ರಾತ್ರಿ ಗಸ್ತು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ.

    ತಡರಾತ್ರಿ ಈ ರೀತಿಯ ಘಟನೆಗಳು ಮರುಕಳಿಸಿದರೆ ಕೂಡಲೇ ಉಪ್ಪಿನಂಗಡಿ ಠಾಣೆಗೆ ಕರೆ ಮಾಡುವಂತೆ ಪೊಲೀಸರು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply