LATEST NEWS
ಪುಣೆ – ನೂರಾರು ಜನರ ಎದುರೇ ಯುವತಿಯ ಬರ್ಬರ ಹ**ತ್ಯೆ
ಪುಣೆ ಜನವರಿ 09: ಕಾಲ್ ಸೆಂಟರ್ ಉದ್ಯೋಗಿಯಾಗಿದ್ದ ಯುವತಿಯನ್ನು ಆಕೆಯ ಸಹದ್ಯೋಗಿಯೇ ನೂರಾರು ಜನರ ಎದುರೇ ಬರ್ಬರವಾಗಿ ಕೊಲೆ ಮಾಡಿದ ಘಟನೆ ಯೆರವಡಾದ ಬಿಪಿಒ ಒಂದರ ಪಾರ್ಕಿಂಗ್ ನಲ್ಲಿ ನಡೆದಿದೆ.
ಮೃತ ಯುವತಿಯನ್ನು ಕತ್ರಜ್ ನಿವಾಸಿ 28 ವರ್ಷದ ಶುಭದಾ ಶಂಕರ್ ಎಂದು ಗುರುತಿಸಲಾಗಿದೆ. ಕೊಲೆ ಮಾಡಿದಾತ ಶಿವಾಜಿನಗರ ನಿವಾಸಿ 30 ವರ್ಷದ ಕೃಷ್ಣ ಸತ್ಯನಾರಾಯಣ್ ಕನೋಜ. ಇಂದು ಸಂಜೆ 6.15ರ ಸುಮಾರಿಗೆ ಯೆರವಾಡದಲ್ಲಿರುವ ಬಹುರಾಷ್ಟ್ರೀಯ ಬಿಪಿಒದ ಪಾರ್ಕಿಂಗ್ ಸ್ಥಳದಲ್ಲಿ ಈ ಘಟನೆ ನಡೆದಿದೆ. ಕೊಲೆಯಾದ ಯುವತಿ ಮತ್ತು ದಾಳಿ ಮಾಡಿದಾತ ಇಬ್ಬರೂ ಒಂದೇ ಬಹುರಾಷ್ಟ್ರೀಯ ಬಿಪಿಒ, ಡಬ್ಲ್ಯೂಎನ್ಎಸ್ ಗ್ಲೋಬಲ್‌ನಲ್ಲಿ ಲೆಕ್ಕಪರಿಶೋಧಕರಾಗಿ ಕೆಲಸ ಮಾಡುತ್ತಿದ್ದಾರೆ.
ಪ್ರಾಥಮಿಕ ತನಿಖೆಯಲ್ಲಿ ಆರೋಪಿ ಮೃತ ಯುವತಿಗೆ ಸ್ವಲ್ಪ ಹಣವನ್ನು ನೀಡಿದ್ದ. ಆಕೆ ಅದನ್ನು ವಾಪಾಸ್ ಕೊಟ್ಟಿರಲಿಲ್ಲ. ಇದೇ ಕಾರಣಕ್ಕೆ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.” ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆ ನೂರಾರು ಜನರ ಎದುರೆ ನಡೆದಿದೆ. ಆಕೆ ಕಚೇರಿಯ ಇತರೆ ಸಿಬ್ಬಂದಿಗಳು ಅಲ್ಲೇ ಇದ್ದರೂ ಕೂಡ ಯಾರೂ ಹಲ್ಲೆಯನ್ನು ತಡೆಯಲು ಮುಂದೆ ಬಂದಿಲ್ಲ.