LATEST NEWS
ಯಡಿಯೂರಪ್ಪ ಸರ್ಕಾರ ಇದ್ದಿದ್ದರೆ ದೇಶದ್ರೋಹಿಗೆ ಕಿಸ್ ಕೊಟ್ಟ ವ್ಯಕ್ತಿಗೆ ಗುಂಡಿಕ್ಕಿ ಕೊಲ್ಲುತ್ತಿತ್ತು; ಬಿವೈ ವಿಜಯೇಂದ್ರ

ಮಂಗಳೂರು ಎಪ್ರಿಲ್ 09: ಪ್ರವೀಣ್ ನೆಟ್ಟಾರು ಕೊಲೆ ಮಾಡಿದ ದೇಶದ್ರೋಹಿಗೆ ಮತ್ತೊಬ್ಬ ದೇಶದ್ರೋಹಿ ಮುತ್ತು ಕೊಟ್ಟಿದ್ದಾನೆ. ರಾಜ್ಯದಲ್ಲಿದ್ದಿದ್ದರೆ ಆ ದೇಶದ್ರೋಹಿನ ಗುಂಡಿಕ್ಕಿ ಕೊಲ್ಲುವಂತ ಕೆಲಸ ಸರಕಾರ ಮಾಡುತ್ತಿತ್ತು ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿದ್ದಾರೆ,
ಮಂಗಳೂರಿನಲ್ಲಿ ನಡೆದ ಬಿಜೆಪಿ ಜನಾಕ್ರೋಶ ಪ್ರತಿಭಟನೆಯಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರದಲ್ಲಿ ಹಿಂದೂ ಗಳಿಗೆ ಅಪಮಾನ ಮಾಡುವ ಕಾರ್ಯ ಮಾಡ್ತಾ ಇದೆ. ಮುಂದಿನ ದಿನಗಳಲ್ಲಿ ಬಿಜೆಪಿ ಕಾಂಗ್ರೆಸ್ ನ್ನು ಬುಡ ಸಮೇತ ಕಿತ್ತು ಹಾಕಲಿದ್ದೇವೆ ಎಂದರು. ಪ್ರವೀಣ್ ನೆಟ್ಟಾರು ಅವರನ್ನು ಕೊಂದ ಒಬ್ಬ ದೇಶ ದ್ರೋಹಿಯನ್ನು ಕೋರ್ಟ್ ಗೆ ತರುವ ವೇಳೆ ಒಬ್ಬ ದೇಶದ್ರೋಹಿ ಬಂದು ಮುತ್ತು ಕೊಟ್ಟಿದ್ದಾನೆ. ಇದೇ ವೇಳೆ ರಾಜ್ಯದಲ್ಲಿ ಬಿಜೆಪಿ ಸರಕಾರವಿದ್ದು ಯಡಿಯೂರಪ್ಪ ಸರ್ಕಾರದ ಅವದಿಯಲ್ಲಿ ಆಗಿದ್ರೆ ಅಲ್ಲೇ ಆ ದೇಶ ದ್ರೋಹಿಯನ್ನು ಗುಂಡಿಕ್ಕಿ ಕೊಲ್ಲುವ ಕಾರ್ಯ ಆಗ್ತಾ ಇತ್ತು ಎಂದರು.

ಹಿಂದು ಹುಡುಗಿಯರ ಮೇಲೆ ಅತ್ಯಾಚಾರ, ಆಕ್ರಮಣ ಆಗುತ್ತಿದ್ದರೂ ಸಿದ್ದರಾಮಯ್ಯ ಸರಕಾರ ಅವರ ಆತ್ಮರಕ್ಷಣೆಗೆ ಯೋಜನೆ ರೂಪಿಸಿಲ್ಲ. ಮುಸ್ಲಿಮ್ ಹುಡುಗಿಯರ ರಕ್ಷಣೆಗಾಗಿ ಸಿದ್ದರಾಮಯ್ಯ ಹಣ ತೆಗೆದಿಟ್ಟಿದ್ದಾರೆ. ಅಲ್ಲದೆ, ಮುಸ್ಲಿಮ್ ಹೆಣ್ಮಕ್ಕಳು ವಿದೇಶದಲ್ಲಿ ಶಿಕ್ಷಣ ಪಡೆಯಲು ಹಣ ಕೊಡುತ್ತಿದ್ದಾರೆ ಎಂದು ಹೇಳಿದ ವಿಜಯೇಂದ್ರ, ದಕ್ಷಿಣ ಕನ್ನಡ ಜಿಲ್ಲೆಯ ಜನರು ಇವರಿಗೆ ಓಟ್ ಕೊಟ್ಟಿಲ್ಲ ಎಂದು ಅನುದಾನ ಕೊಡುತ್ತಿಲ್ಲ. ಬಿಜೆಪಿ ಸರಕಾರ ಇದ್ದಾಗ ದಕ್ಷಿಣ ಕನ್ನಡ ಜಿಲ್ಲೆಗೆ 19 ಸಾವಿರ ಕೊಟ್ಟಿತ್ತು. ಕಾಂಗ್ರೆಸ್ ಸರಕಾರ ಎರಡು ವರ್ಷದಲ್ಲಿ ಏನಾದ್ರೂ ಕೊಟ್ಟಿದೆಯಾ ಎಂದು ಪ್ರಶ್ನಿಸಿದರು.