LATEST NEWS
ಬೈಂದೂರು ಗಾಂಧಿ ಮೈದಾನದಲ್ಲಿ ಭವನ ನಿರ್ಮಾಣಕ್ಕೆ ವಿರೋಧ
ಉಡುಪಿ ಡಿಸೆಂಬರ್ 20: ಬೈಂದೂರು ಗಾಂಧಿ ಮೈದಾನದಲ್ಲಿ ಭವನ ನಿರ್ಮಾಣ ವಿರೋಧಿಸಿ ಸ್ಥಳೀಯರು ಪ್ರತಿಭಟನೆ ನಡೆಸಿದ್ದಾರೆ.
ಬೈಂದೂರಿನ ಗಾಂಧಿ ಮೈದಾನ ಒಟ್ಟು 4 ವರೆ ಎಕರೆ ಜಾಗದಲ್ಲಿದ್ದು, ಅಲ್ಲಿ ಜಿಲ್ಲಾಡಳಿತ ಈಗ ಕವಿ ಗೋಪಾಲಕೃಷ್ಣ ಅಡಿಗರ ಹೆಸರನಲ್ಲಿ ನಿರ್ಮಾಣಕ್ಕೆ ಮುಂದಾಗಿದೆ. ಇದಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿದ್ದು. ಸ್ಥಳೀಯರ ಅಭಿಪ್ರಾಯಕ್ಕೆ ಬೆಲೆ ನೀಡದೆ ಪುರಭವನ ನಿರ್ಮಾಣಕ್ಕೆ ಕಾಮಗಾರಿ ಆರಂಭಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ, ಸ್ಥಳೀಯರು ಪ್ರತಿಭಟನೆ ನಡೆಸಿದ್ದಾರೆ.
ಜನೋಪಯೋಗಿ ಸ್ಥಳವಾಗಿದ್ದ ಗಾಂಧಿ ಮೈದಾನದಲ್ಲಿ ಯಾವುದೇ ರೀತಿಯ ಭವನ ನಿರ್ಮಾಣಕ್ಕೆ ವಿರೋಧ ವ್ಯಕ್ತವಾಗಿದೆ. ಸ್ಥಳೀಯ ಶಾಸಕರು, ಸ್ಥಳಿಯಾಡಳಿತ, ಜಿಲ್ಲಾಢಳಿತದ ವಿರುದ್ಧ ಹೋರಾಟಕ್ಕೆ ಸ್ಥಳೀಯರು ಮುಂದಾಗಿದ್ದಾರೆ.