Connect with us

    LATEST NEWS

    ಇಂದಿನಿಂದ ಶಿರಾಡಿಘಾಟ್​ನಲ್ಲಿ ಬಸ್​ಗಳ ಸಂಚಾರಕ್ಕೆ ಅವಕಾಶ

    ಇಂದಿನಿಂದ ಶಿರಾಡಿಘಾಟ್​ನಲ್ಲಿ ಬಸ್​ಗಳ ಸಂಚಾರಕ್ಕೆ ಅವಕಾಶ

    ಮಂಗಳೂರು ಅಕ್ಟೋಬರ್ 3: ಕಳೆದ ಎರಡು ತಿಂಗಳಿನ ಹಿಂದೆ ಸುರಿದ ಭಾರೀ ಮಳೆಗೆ ಗುಡ್ಡ ಕುಸಿತ ಉಂಟಾಗಿ ಬಂದ್​ ಆಗಿದ್ದ ಶಿರಾಡಿಘಾಟ್​ನಲ್ಲಿ ಇಂದಿನಿಂದ ಬಸ್​ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ಜಿಲ್ಲಾಡಳಿತ ಈ ಅವಕಾಶ ನೀಡಿದ್ದು, ಬೆಂಗಳೂರು-ಮಂಗಳೂರು ಪ್ರಯಾಣಿಕರಿಗೆ ಈ ಸುದ್ದಿ ಖುಷಿ ಕೊಟ್ಟಿದೆ.

    ಈ ಬಾರಿಯ ಮಳೆಗಾಲದಲ್ಲಿ ಸುರಿದ ಭಾರಿ ಮಳೆ ಭಾರಿ ಅನಾಹುತವನ್ನು ಸೃಷ್ಠಿ ಮಾಡಿತ್ತು. ಮಡಿಕೇರಿಯಲ್ಲಿ ಊರುಗಳೇ ಕೊಚ್ಚಿ ಹೋಗಿದ್ದರೆ, ಇತ್ತ ಹಾಸನ ಭಾಗದಲ್ಲಿ ರೈಲು ಹಳಿ ಹಾಗೂ ರಸ್ತೆಗಳ ಮೇಲೆ ಗುಡ್ಡ ಕುಸಿತವಾಗಿ ಸಂಚಾರ ಬಂದ್​ ಆಗಿತ್ತು.

    ಈ ವೇಳೆ ಹೊಸದಾಗಿ ಕಾಂಕ್ರೀಟೀಕರಣಗೊಂಡ ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ಶಿರಾಡಿಘಾಟ್ ರಸ್ತೆ ಸಾರ್ವಜನಿಕರಿಗೆ ಪ್ರಾರಂಭವಾದ ಕೆಲವೇ ದಿನಗಳಲ್ಲಿ ಮಳೆಯಿಂದಾಗಿ ಮತ್ತೆ ಬೆಂಗಳೂರು-ಮಂಗಳೂರು ನಡುವಿನ ರಾಷ್ಟ್ರೀಯ ಹೆದ್ದಾರಿ ಕೂಡಾ ಬಂದ್​ ಆಗಿತ್ತು. ಹೀಗಾಗಿ ಪ್ರಯಾಣಿಕರು ಬೇರೆ ವಿಧಿ ಇಲ್ಲದೇ ಚಾರ್ಮಾಡಿ ಘಾಟ್​ನಲ್ಲೇ ಪ್ರಯಾಣಿಸಬೇಕಾದ ಅನಿವಾರ್ಯತೆ ಎದುರಾಗಿತ್ತು. ಇದಾದ ಬಳಿಕ ಕಳೆದ ತಿಂಗಳು ಲಘು ವಾಹನಗಳಿಗೆ ಸಂಚರಿಸಲು ಅವಕಾಶ ಮಾಡಿಕೊಟ್ಟಿದ್ದು, ಕೊಂಚ ಸಮಾಧಾನ ನೀಡಿತ್ತು.

    ಹಾಸನ ಜಿಲ್ಲಾಡಳಿತ ಹಾಗೂ ದಕ್ಷಿಣಕನ್ನಡ ಜಿಲ್ಲಾಡಳಿತ ಇಂದಿನಿಂದ ಶಿರಾಡಿ ಘಾಟ್​ನಲ್ಲಿ ಬಸ್​ಗಳ ಸಂಚಾರಕ್ಕೆ ರಸ್ತೆಯನ್ನು ಮುಕ್ತಗೊಳಿಸಿದೆ. ಆದರೆ ಕೇವಲ ಬಸ್​ ಹಾಗೂ ಲಘು ವಾಹನಗಳಿಗಷ್ಟೇ ಸಂಚರಿಸಲು ಅವಕಾಶವಿದ್ದು, ಬೇರೆ ಯಾವುದೇ ಘನ ವಾಹನಗಳ ಸಂಚಾರಕ್ಕೆ ಅವಕಾಶ ನೀಡಿಲ್ಲ ಎಂದೂ ಜಿಲ್ಲಾಡಳಿತ ಸ್ಪಷ್ಟಪಡಿಸಿದೆ.

    Share Information
    Advertisement
    Click to comment

    You must be logged in to post a comment Login

    Leave a Reply